
ಸುಳ್ಯ: ಮಹಿಳೆಯೋರ್ವರು ತನ್ನ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಮಗಳು ಅದೃಷ್ಟವಶಾತ್ ಬದುಕುಳಿದ ಘಟನೆ ಸುಳ್ಯ ತಾಲ್ಲೂಕಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಗೀತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಎನ್‌ಎಂಸಿಯಲ್ಲಿ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ತನ್ನ ೪ ವರ್ಷದ ಮಗಳು ಪೂರ್ವಿಕಾಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮುಂಜಾನೆ ಮನೆಯವರು ಎದ್ದಾಗ ದಯಾನಂದ ಅವರು ಪತ್ನಿ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಡಿದಾಗ ಬಾವಿಯಲ್ಲಿ ಮಗಳು ಮತ್ತು ಪತ್ನಿ ಬಿದ್ದಿರುವುದು ಕಂಡುಬAದಿದೆ. ಮಗಳು ಬಾವಿಯೊಳಗೆ ಕಲ್ಲಿನ ಸಹಾಯದಿಂದ ಬದುಕುಳಿದಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.














