Friday, March 13, 2026
ಕುಂದಾಪುರಸುದ್ದಿ

ಕುಂದಾಪುರ :ಕೊಯಿಮುತ್ತುರ್ ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ನಲ್ಲಿ 2 ಚಿನ್ನ , 2 ಬೆಳ್ಳಿ ಗೆದ್ದ ಸತೀಶ್ ಖಾರ್ವಿ- ಕಹಳೆ ನ್ಯೂಸ್

ಕುಂದಾಪುರ : ಇತ್ತೀಚೆಗೆ ಕೊಯಿಮುತ್ತುರ್ ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್‍ನಲ್ಲಿ ಕುಂದಾಪುರ ಹಕ್ರ್ಯುಲೆಸ್ ಜಿಮ್ ನ ವ್ಯವಸ್ಥಾಪಕ ರಾಗಿರುವ ಸತೀಶ್ ಖಾರ್ವಿ ಮಾಸ್ಟರ್ 1 ವಿಭಾಗ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಹಾಗೂ 2 ಬೆಳ್ಳಿ ಪದಕ ಹಾಗೂ ಏಷ್ಯಾ ಬಲಿಷ್ಠ 1st ರನ್ನರ್ ಅಪ್ ಪ್ರಶಸ್ತಿ- 2022 ಪಡೆದುಕೊಂಡಿದ್ದಾರೆ.

ಈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಇರಾನಿನ ಅಮೀರ್ ಹಾಗೂ ಕಂಚಿನ ಪದಕ ಭಾರತದ ಕುಮಾರ್ ಉಪೇಂದ್ರ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಇದಕ್ಕೂ ಮೊದಲು ಮೈಸೂರಿನಲ್ಲಿ ನಡೆದ, ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಾಸ್ಟರ್ 1 ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕರ್ನಾಟಕದ ಬಲಿಷ್ಠ ಪುರುಷ- ಪ್ರಶಸ್ತಿ 2022ನ್ನು ಸತೀಶ್ ಖಾರ್ವಿ ತಮ್ಮದಾಗಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾ ಸಾಧನೆ ಗುರುತಿಸಿ, ವಿಜಯಪುರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ -2022 ರಾಜ್ಯ ಪ್ರಶಸ್ತಿ ಕೂಡ ಇವರಿಗೆ ದೊರಕಿದೆ.