Thursday, March 12, 2026
ದಕ್ಷಿಣ ಕನ್ನಡಸಿನಿಮಾಸುದ್ದಿ

ಕೋಸ್ಟಲ್ ವುಡ್ ಗೆ ಬರುತ್ತಿದ್ದಾಳೆ ‘ಸೇಲೆ ದುಗಮ್ಮ’.! ; ” ಮಗನೇ ಮಹಿಷ ” ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ತಮ್ಮ ಮುಂದಿನ ನಿರ್ದೇಶನದ ಚಿತ್ರ ಹೆಸರು ಘೋಷಿಸಿದ ನಿರ್ದೇಶಕ ವೀರೇಂದ್ರ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು, ಜೂ 22 : ಕೋಸ್ಟಲ್ ವುಡ್ ಸಿನಿಮಾ ‘ಮಗನೆ ಮಹಿಷ’ ನಿರ್ದೇಶಿಸಿದ್ದ ವೀರೇಂದ್ರ ಶೆಟ್ಟಿ ಅವರು ತಮ್ಮ ಮುಂದಿನ ನಿರ್ದೇಶನದ ಚಿತ್ರ ಹೆಸರು ಘೋಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜೂನ್ 19 ಭಾನುವಾರದಂದು ಹೊಸ ಚಿತ್ರದ ಹೆಸರು ‘ಸೇಲೆ ದುಗಮ್ಮ’ ಎಂದು ಎನೌನ್ಸ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು

ಇತ್ತೀಚೆಗೆ ಬಿಡುಗಡೆಯಾದ ಮಗನೇ ಮಹಿಷ ಚಿತ್ರದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಅವರು ತಮ್ಮ ಹೊಸ ಚಿತ್ರದ ಶೀರ್ಷಿಕೆಯನ್ನು ಬಹಿರಂಗಗೊಳಿಸಿದ್ದು, ಸೇಲೆ ದುಗಮ್ಮ ವೀರೇಂದ್ರ ಶೆಟ್ಟಿ ಅವರ ನಾಲ್ಕನೇ ನಿರ್ದೇಶನದ ಚಿತ್ರವಾಗಿದೆ.

ಈ ಹಿಂದೆ ಕನ್ನಡ ಚಲನಚಿತ್ರ ‘ಸವರ್ಣ ದೀರ್ಘ ಸಂಧಿ’ ಹಾಗೂ 511 ದಿನಗಳ ಕಾಲ ಚಿತ್ರಮಂದಿರದಲ್ಲಿ ಇದ್ದು ದಾಖಲೆ ಬರೆದ ಚಾಲಿಪೋಲಿಲು ನಿರ್ದೇಶಿಸಿದ್ದರು.ನಿರ್ದೇಶಕ ವೀರೇಂದ್ರ ಶೆಟ್ಟಿ ಸೇಲೆ ದುಗಮ್ಮ ಸಿನಿಮಾದ ತಾರಾಗಣದ ಕುರಿತು ಮಾಹಿತಿ ಬಹಿರಂಗಪಡಿಸಿಲ್ಲ.

ಲಾಯ್ ವ್ಯಾಲೆಂಟೈನ್ ಸಲ್ಡಾನ್ಹಾ ಅವರು ಸೇಲೆದುಗಮ್ಮ ಸಂಗೀತ ನಿರ್ದೇಶಕರಾಗಿ ಮಂಡಳಿಯಲ್ಲಿದ್ದರು.