Recent Posts

Tuesday, March 10, 2026
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಕೆದಿಲ ಸತ್ತಿಕಲ್ಲಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಗೋ ವಧೆ : ಅಕ್ರಮ ಕಸಾಯಿಖಾನೆ ವಶಪಡಿಸಿಕೊಂಡ ಪೊಲೀಸರು – ಕಹಳೆ ನ್ಯೂಸ್

ಪುತ್ತೂರು : ಕೆದಿಲ ಸತ್ತಿಕಲ್ಲಿನಲ್ಲಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಎಗ್ಗಿಲ್ಲದೆ ಖಾಸಯಿಕಾನೆಗಳು ನಡೆಯುತ್ತಿದೆ. ಹಲವು ಬಾರಿ ಪೋಲೀಸರು ಕಸಾಯಿಖಾನೆಯನ್ನ ವಶಪಡಿಸಿಕೊಂಡರೂ ಮತ್ತೆ ಮತ್ತೆ ಇದೇ ದಂಧೆ ನಡೆಯುತ್ತಲೆ ಇದೆ. ಈ ಬಗ್ಗೆ ಹಿಂದು ಜಾಗರಣ ವೇದಿಕೆಯು ಪೊಲೀಸರಿಗೆ ಖಚಿತ ಮಾಹಿತಿ ನೀಡಿದ್ದು, ಇಂದು ಪುತ್ತೂರು ನಗರ ಠಾಣೆಯ ಪಿಎಸ್‌ಐ ರಾಜೇಶ್ ನೇತ್ರತ್ವದ ತಂಡ ದಾಳಿ ನಡೆಸಿದೆ. ಸತ್ತಿಕಲ್ಲು ಬೈಲು ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ಹಲವು ಸಮಯದಿಂದ ನಡೆಸುತ್ತಿರುವ ಅಕ್ರಮ ಕಸಾಯಿಖಾನೆಯ ಬಗ್ಗೆ ಹಿಂದು ಜಾಗರಣ ವೇದಿಕೆಯು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ದಾಳಿ ಮಾಡಿದ ಪೊಲೀಸರು ೬೦ಕೆಜಿ ಗೂ ಹೆಚ್ಚಿನ ಗೋ ಮಾಂಸ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಗೋವನ್ನು ಕಟಾವ್ ಮಾಡುತ್ತಿದ್ದ ಆರೋಪಿ ಅಬ್ದುಲ್ ರಹಿಮನ್ ಎಂಬಾತನನ್ನು ಬಂದಿಸಲಾಗಿದೆ.

ಅಕ್ರಮ ಗೋ ಹತ್ಯೆಯನ್ನ ಬಲವಾಗಿ ಖಂಡಿಸಿದ್ದು, ಕೆದಿಲಾ ಗ್ರಾಮದಲ್ಲಿ ನಡೆಯುವ ಇನ್ನೂ ಹೆಚ್ಚಿನ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುವಂತೆ ಆರಕ್ಷಕರಲ್ಲಿ ಮನವಿ ಮಾಡುತ್ತೇವೆ ಎಂದು ಹಿಂದು ಜಾಗರಣ ವೇದಿಕೆಯ ವಿಟ್ಲ ತಾಲೂಕು ಅಧ್ಯಕ್ಷ ಗಣೇಶ ಕುಲಾಲ್ ಆಗ್ರಹಿಸಿದರು. ಅಲ್ಲದೆ ಅಪರಾದಿಯನ್ನು ಬಂಧಿಸಿರುವ ಪೋಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು