ಪದವಿನಂಗಡಿ ಪ್ರದೇಶದ ಗಂಧಕಾಡು – ಭಟ್ರಕುಮೇರಿ ಕೂಡು ರಸ್ತೆ ಬಳಿ ರಸ್ತೆ ಕಾಂಕ್ರೀಟಿಕರಣ ಮತ್ತು ರಸ್ತೆ ಅಗಲೀಕರಣ, ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ.ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರದ 19 ನೇ ಪಚ್ಚನಾಡಿ ವಾರ್ಡಿನ ಪದವಿನಂಗಡಿ ಪ್ರದೇಶದ ಒಟ್ಟು 16 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗಂಧಕಾಡು – ಭಟ್ರಕುಮೇರಿ ಕೂಡು ರಸ್ತೆ ಬಳಿ ರಸ್ತೆ ಕಾಂಕ್ರೀಟಿಕರಣ ಮತ್ತು ಮುಗ್ರೋಡಿ ಪರಿಸರದ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಬಳಿ ರಸ್ತೆ ಅಗಲೀಕರಣ, ತಡೆಗೋಡೆ ರಚನೆ, ಚರಂಡಿ ನಿರ್ಮಾಣ ಹಾಗೂ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮ.ನ.ಪಾ ಸದಸ್ಯೆ ಸಂಗೀತಾ ಆರ್. ನಾಯಕ್, ಮಂಡಲದ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಓಬಿಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ರಾಮ ಮುಗ್ರೋಡಿ, ಎಸ್ ಸಿ ಮೋರ್ಚಾದ ಕಾರ್ಯದರ್ಶಿ ಮುಕೇಶ್ ಗಂಧಕಾಡು, ಶಕ್ತಿಕೇಂದ್ರ ಸಹಪ್ರಮುಖ್ ವಸಂತ್ ಮುಗ್ರೋಡಿ, ಬೂತ್ ಅಧ್ಯಕ್ಷರಾದ ಮನೋಜ್ ಮುಗ್ರೋಡಿ ಮತ್ತಿತರರು ಉಪಸ್ಥಿತರಿದ್ದರು














