Saturday, March 14, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಲ್ನಾಡು ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ರಿಕ್ಷಾದಲ್ಲೇ ಪತ್ತೆ..!- ಕಹಳೆ ನ್ಯೂಸ್

ಪುತ್ತೂರು: ಬಾಡಿಗೆಗೆಂದು ಆಟೋ ರಿಕ್ಷಾದಲ್ಲಿ ಹೋಗಿ ನಾಪತ್ತೆಯಾಗಿದ್ದ ಆಟೋ ಚಾಲಕರೋರ್ವರ ಮೃತದೇಹವು ಬಲ್ನಾಡಿನ ಮಚ್ಚಿಮಲೆ ಬೊಲ್ಲಾಣ ರಸ್ತೆಯ ಮಧ್ಯೆ ರಿಕ್ಷಾದಲ್ಲಿ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಮೃತ ಚಾಲಕನನ್ನು ಬಲ್ನಾಡು ಉಜ್ರುಪಾದೆ ನಿವಾಸಿ ಸುಂದರ ಪಿ ಎಂದು ಗುರುತಿಸಲಾಗಿದ್ದು, ಫೆ. 13ರಂದು ಮನೆಯಿಂದ ಆಟೋ ರಿಕ್ಷಾದಲ್ಲಿ ಬಾಡಿಗೆಗೆಂದು ತೆರಳಿದ್ದ ಸುಂದರ ಮನೆಗೆ ಬಾರದೇ ಇದ್ದುದರಿಂದ ಅವರಿಗೆ ಪೋನ್ ಮಾಡಿದಾಗ ಅವರ ಮೊಬೈಲ್ ಮನೆಯಲ್ಲೇ ಬಾಕಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಸುಂದರರವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಅವರ ಮೃತ ದೇಹ ಅವರ ರಿಕ್ಷಾದಲ್ಲೇ ಪತ್ತೆಯಾಗಿದೆ.