
ಮಂಗಳೂರು: ನಗರದ ಕಾವೂರು ಬಳಿಯ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆ ಇರುವ ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿಯು ಗಾಂಜಾ ಸೇವನೆ ಮಾಡುತ್ತಿದ್ದ. ಈ ಬಗ್ಗೆ ಅಬಕಾರಿ ಇಲಾಖೆಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಅಬಕಾರಿ ಉಪ ಆಯುಕ್ತರು , ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರುರವರ ನಿರ್ದೇಶನದ ಮೇಲೆ, ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪ ವಿಭಾಗ -2 ಬೆಂಗಳೂರು ಇವರ ಮಾರ್ಗದರ್ಶದಂತೆ, ಪ್ರತಿಭಾ ಜಿ ಅಬಕಾರಿ ನಿರೀಕ್ಷಕರವರ ನೇತ್ರತ್ವದಲ್ಲಿ ಮಂಗಳೂರು ನಗರದ ಕಾವೂರು ಬಳಿ ಗಸ್ತು ನಡೆಸುತ್ತಿದ್ದರು. ಈ ವೇಳೆ ಮಂಗಳೂರಿನ ಕಾವೂರನ ಅನುಷ್(24) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವಿಸಿದಂತೆ ಕಂಡುಬಂದಿದ್ದು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಆತ ಗಾಂಜಾ ಎಂಬ ಮಾದಕ ವಸ್ತು ಸೇವಿಸಿರುವುದರ ಬಗ್ಗೆ ಖಚಿತ ಮಾಹಿತಿ ಪಡೆಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು , ಆತ ಗಾಂಜಾ ಸೇವಿಸಿರುವುದು ವೈದ್ಯಾಧಿಕಾರಿಯವರ ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ಆತನ ವಿರುದ್ಧ Narcotic Drug & Psyenntropic Substances Act 1985 ಕಲಂ 27 (B) ಪ್ರಕಾರ ಪ್ರಕರಣ ದಾಖಲಿಸಲಾಗಿ.

ಬಳಿಕ ಆರೋಪಿಯನ್ನು ದಸ್ತಗಿರಿ ಮಾಡಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ . ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ.ಪಿರವರ ನಿರ್ದೇಶನ ಮೇರೆಗೆ , ಅಬಕಾರಿ ಉಪ ಅಧೀಕ್ಷಕರಾದ ಅಮರ್ ನಾಥ ಎಸ್.ಎಸ್ . ಭಂಡಾರಿ ಅವರ ನೇತ್ರತ್ವದಲ್ಲಿ ಮಂಗಳೂರು ಉಪ ವಿಭಾಗದ ಅಬಕಾರಿ ಪೇದೆಯವರಾದ ಜಯಪ್ಪ ಲಮಾಣಿ ಹಾಗೂ ಸಂತೋಷ್ ಎ , ಡಂಬಳ್ಳಿ ಮತ್ತು ವಾಹನ ಚಾಲಕರಾದ ಮಾಯಿಲಪ್ಪರವರು ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.














