ಪುತ್ತೂರಿನ ದರ್ಬೆಯ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಪ್ರಕರಣ | ವಾಸ್ತವ ಅಂಶವನ್ನು ಸಮಾಜದ ಮುಂದಿಟ್ಟು, ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಎಬಿವಿಪಿ ಮನವಿ – ಕಹಳೆ ನ್ಯೂಸ್

ಪುತ್ತೂರು: ಕಾಲೇಜಿನ ವಿದ್ಯಾರ್ಥಿಯ ಮೇಲೆ ದೈಹಿಕ ಶಿಕ್ಷಣ ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯದಂತಹ ಕೃತ್ಯವನ್ನು ಎಸಗಿರುವುದು ಅತ್ಯಂತ ಶೋಚನೀಯ ಮತ್ತು ಖಂಡನೀಯ. ಈ ಪ್ರಕರಣಕ್ಕೆ ಸಂಬಂಧಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತನಿಖೆ ಮಾಡಬೇಕು. ಸಂತ್ರಸ್ತೆ ಗೆ ನ್ಯಾಯ ಒದಗಿಸಿ, ವಾಸ್ತವ ಅಂಶವನ್ನು ಸಮಾಜದ ಮುಂದಿಡುವಂತೆ ಎಬಿವಿಪಿ ಪುತ್ತೂರು ತಹಸೀಲ್ಧಾರ್ ಗೆ ಮನವಿ ಮಾಡಿದೆ.

ತಹಸೀಲ್ದಾರ್ ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದರು. ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯದ ಸತ್ಯಾಸತ್ಯತೆಯನ್ನು ಪರಿಶೀಲಿ ತ್ವರಿತ ತನಿಖೆಯನ್ನು ಮಾಡಬೇಕೆಂದು ಎಬಿವಿಪಿಯಿಂದ ಆಗ್ರಹಿಸುತ್ತೇವೆ. ಇದರ ಜೊತೆಗೆ ಪ್ರಕರಣದಲ್ಲಿ ಸಹಜವಾಗಿ ಸಂತ್ರಕ್ಕೆ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು, ಹಾಗೂ ಆರೋಪಿ ವ್ಯಕ್ತಿಯನ್ನು ಸಮಗ್ರ ತನಿಖೆಗೆ ಒಳಪಡಿಸಿ ವಾಸ್ತವ ಅಂಶವನ್ನು ಸಮಾಜದ ಮುಂದೆ ಇಡಬೇಕೆಂದು. ಒಂದು ವೇಳೆ ಈ ಘಟನೆಯಲ್ಲಿ ಷಡ್ಯಂತ್ರ ನಡೆದಿದೆ ಎಂದಾದರೆ ಇದನ್ನೂ ಕೂಡಾ ಸಮಗ್ರವಾಗಿ ಸಮಾಜದ ಮುಂದೆ ಇಡಬೇಕೆಂದು ಎಬಿವಿಪಿ ಪ್ರಮುಖರು ಒತ್ತಾಯಿಸಿದರು.

ಕ್ಯಾಂಪಸ್ ಭಯ ಮುಕ್ತವಾಗಲಿ:
ಶಾಲಾ-ಕಾಲೇಜುಗಳ ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿನಿಯರು ಭಯಮುಕ್ತ – ಆತಂಕರಹಿತ ಓದುವ ವಾತಾವರಣವನ್ನು ನಿರ್ಮಾಣ ಮಾಡಬೇಕು, ಇದಕ್ಕೆ ಸಂಬಂಧಿಸಿದಂತೆ ಆಯಾಯ ಕಾಲೇಜುಗಳು ಸೂಕ್ತವಾದ ವ್ಯವಸ್ಥೆಯನ್ನು ಕ್ಯಾಂಪಸ್ ಗಳಲ್ಲಿ ಕಲ್ಪಿಸಬೇಕು. ಅಲ್ಲದೇ ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿಗಾ ಇರಿಸಿ ಕರ್ತವ್ಯ ನಿರ್ವಹಿಸಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಪೂರ್ವಕವಾಗಿ ಮನವಿಯನ್ನು ಮಾಡುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಬಿವಿಪಿ ಪುತ್ತೂರು ನಗರ ಕಾರ್ಯದರ್ಶಿ ಜಗದೀಶ್, ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯಿಲ, ಮಂಗಳೂರು ಜಿಲ್ಲಾ ಕಾರ್ಯದರ್ಶಿ ನಿಶಾನ್ ಆಳ್ವ, ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ಬಂಟ್ವಾಳ ತಾಲೂಕು ಸಂಚಾಲಕ ದಿನೇಶ್ ಕೊಯಿಲ, ನಗರ ಕಾರ್ಯದರ್ಶಿ ನಾಗರಾಜ್, ಸಾಮಾಜಿಕಜಾಲತಾಣ ಪ್ರಮುಖ್ ಕಾರ್ತಿಕ್, ವ್ಯವಸ್ಥಾಪನಾ ಪ್ರಮುಖ್ ಗಗನ್, ಪುತ್ತೂರು ಸಹಕಾರ್ಯದರ್ಶಿ ಶಮಂತ್, ಜೀವನ್, ಆಕಾಶ್ ಮತ್ತಿರರು ಮನವಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.














