
ಗುರುಪುರದ ಚಿಲಿಂಬಿ ಗುಡ್ಡೆ ಎಂಬಲ್ಲಿ ಒಂದು ಹಿಂದೂ ಯುವಕ ಹಾಗೂ ಮುಸ್ಲಿಂ ಯುವಕನೊಂದಿಗೆ ಇಬ್ಬರು ಹಿಂದೂ ಯುವತಿಯರು ಪತ್ತೆಯಾಗಿದ್ದಾರೆ. ಬಜರಂಗದಳ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ ವೇಳೆ ಕೃತ್ಯ ಬೆಳಕಿಗೆ ಬಂದಿದ್ದು, ಇನ್ನೂ ಇವರು ಬಳಸಿದ್ದ ಕಾರ್‌ಗೆ ನಂಬರ್ ಪ್ಲೇಟ್ ಇಲ್ಲದಿರುವುದು ಅನುಮಾನ ಮೂಡಿಸಿದೆ. ಪತ್ತೆಯಾದ ನಾಲ್ವರನ್ನೂ ಬಜ್ಪೆ ಪೋಲಿಸ್ ಠಾಣೆಯ ಪೋಲಿಸರಿಗೆ ಒಪ್ಪಿಸಲಾಗಿದೆ. ಘಟನೆಯ ಹಿಂದೆ ಗಾಂಜಾಮಾಫಿಯಾದ ಶಂಕೆ ವ್ಯಕ್ತವಾಗಿದ್ದು, ಉನ್ನತ ತನಿಖೆ ನಡೆಸುವಂತೆ ಬಜರಂಗದಳದ ನಾಯಕರು ಆಗ್ರಹಿಸಿದ್ದಾರೆ.















