
ಪಂಡಿತ್ ದೀನದಯಾಳ್ ಉಪಾಧ್ಯಾಯ ಇವರ ಜನ್ಮ ದಿನಾಚರಣೆಯನ್ನು ಬಂದಾರು ಗ್ರಾಮದ ಮೈರೋಳ್ತಡ್ಕ -218 ನೇ ವಾರ್ಡಿನ ಬೂತ್ ಅಧ್ಯಕ್ಷರಾದ ಪ್ರಶಾಂತ್ ಗೌಡರ ಮನೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೀನದಯಾಳ್ ಜೀಯವರ ಜೀವನ ಚರಿತ್ರೆಯನ್ನು ಮಂಡಲ ಉಪಾಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಂದಾರು ಶಕ್ತಿ ಕೇಂದ್ರದ ಪ್ರಮುಖ್ ಅಶೋಕ ಗೌಡ ಪಾಂಜಾಳ, ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ, ಕಾರ್ಯದರ್ಶಿ ಜನಾರ್ದನ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ. ಕೆ.ಗೌಡ, ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ಅಧ್ಯಕ್ಷರಾದ ಬಾಬು ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ ಖಂಡಿಗ, ಶ್ರೀಮತಿ ಸುಚಿತ್ರಾ ಮುರ್ತಾಜೆ, ಯುವಮೋರ್ಚಾ ಸಂಚಾಲಕರಾದ ಗಿರೀಶ್ ಗೌಡ ಬಿ.ಕೆ ಚಿರಾಮೃತ, ಲೋಹಿತ್ ಬೊಲೋಡಿ, ಜಯಪ್ರಕಾಶ್ ಮೈರೋಳ್ತಡ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಾದ ಬಾಬು ಗೌಡ ಇವರನ್ನು ಸನ್ಮಾನಿಸಲಾಯಿತು, ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಬೂತ್ ಕಾರ್ಯದರ್ಶಿ ಜನಾರ್ದನ ಗೌಡ ಸ್ವಾಗತಿಸಿ ಧನ್ಯವಾದವಿತ್ತರು.














