
ಮಂಗಳೂರು: ಕೊರೊನಾದ ನಡುವೆಯು ನಾಡಿನೆಲ್ಲೆಡೆ ನಾಗರಪಂಚಮಿ ಹಬ್ಬದ ಸಂಭ್ರಮ. ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧ ಹಿನ್ನೆಲೆ ಭಕ್ತಾಧಿಗಳು ನಾಗನಿಗೆ ಸೀಯಾಳ, ಪಿಂಗಾರ, ಹೂ-ಹಣ್ಣುಗಳನ್ನು ಹೊರಗಿನಿಂದಲೇ ಸಮರ್ಪಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿಯಮವನ್ನ ಪಾಲಿಸಿ, ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಸರಳವಾಗಿ ನಾಗರಪಂಚಮಿಯನ್ನು ಆಚರಿಸಲಾಯಿತು.














