
ಸುಬ್ರಹ್ಮಣ್ಯ ಠಾಣೆಯ ಸಂದ್ಯಾ ಪೊಲೀಸ್ ಅವರ ಪತಿ ಯೊಗೀಶ್ ಇಂದು (ಜು.23) ರಾತ್ರಿ ಹೃದಯಾಘಾತದಿಂದ ನಿಧನರಾದರು. ಎದೆ ನೋವು ಬಂದ ಕಾರಣ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದು ಬಂದಿದೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ತಾಯಿ, ಇಬ್ಬರು ಮಕ್ಕಳು, ಸಹೋದರ, ಸಹೋದರಿ ಅವರುಗಳನ್ನು ಅಗಲಿದ್ದಾರೆ.














