Tuesday, March 17, 2026
ಸುದ್ದಿ

ಮಂಗಳೂರು ಉಪ ವಿಭಾಗ ಅಬಕಾರಿ ಧಾಳಿ ಅಕ್ರಮ ಮದ್ಯ ಮಾರಾಟ ಪ್ರಕರಣ ಧಾಕಲು ದ್ವಿಚಕ್ರ ವಾಹನ ವಶಕ್ಕೆ-ಕಹಳೆ ನ್ಯೂಸ್

ಕೋವಿಡ್ -19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಅಬಕಾರಿ ಉಪ ಆಯುಕ್ತರು , ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ನಿರ್ದೇಶನದ ಮೇರೆಗೆ ದಿನಾಂಕ : 14-05-2021 ರಂದು ಗಸ್ತು ನಡೆಸುತ್ತಿದ್ದ ಸಮಯದಲ್ಲಿ ದ್ವಿಚಕ್ರ ವಾಹನ ಸಂಖ್ಯೆ ಕೆಎ – 01- S 597 SUZUKI FIERO ಇದರಲ್ಲಿ ಅಕ್ರಮವಾಗಿ 17.280 ಲೀ ಮದ್ಯವನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ದಾಸ್ತಾನು ಇಟ್ಟಿರುವುದನ್ನು ಪತ್ತೆಹಚ್ಚಲಾಗಿದ್ದು ತಕ್ಷೀರು ಸಮಯದಲ್ಲಿ ಆರೋಪಿ ಪರಾರಿಯಾಗಿರುತ್ತಾರೆ .

ಹಾಗೂ ವಾಹನದ ಮಾಲೀಕರನ್ನು ಪತ್ತೆ ಹಚ್ಚಬೇಕಾಗಿದೆ . 17.280 De ಮದ್ಯವನ್ನು ವಶಪಡಿಸಿಕೊಂಡಿದ್ದು , ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 40376-00 ಎಂದು ಅಂದಾಜಿಸಲಾಗಿದೆ. ಸದ್ರಿ ಪ್ರಕರಣವನ್ನು ಶ್ರೀ ಅಮರ್ ನಾಥ ಎಸ್‌.ಎಸ್‌ . ಭಂಡಾರಿ ಅಬಕಾರಿ ಉಪ ಅಧೀಕ್ಷಕರು , ಮಂಗಳೂರು ಉಪವಿಭಾಗ -2 ಇವರು ಮೊಕದ್ದಮೆಯನ್ನು ದಾಖಲು ಮಾಡಿರುತ್ತಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಬಿಂದುಶ್ರೀ . ಪಿ . ರವರ ನಿರ್ದೇಶನದ ಮೇರೆಗೆ , ಅಬಕಾರಿ ಉಪ ಅಧೀಕ್ಷಕರಾದ ಶ್ರೀ ಅಮರ್ ನಾಥ ಎಸ್.ಎಸ್ . ಭಂಡಾರಿ ಇವರ ನೇತ್ರತ್ವದಲ್ಲಿ ಮಂಗಳೂರು ಉಪ ವಿಭಾಗದ ಅಬಕಾರಿ ನಿರೀಕ್ಷಕರಾದ ಶ್ರೀ.ರವಿನಾರಾಯಣ ಪಿ.ಮಳೆಕರ ಹಾಗೂ ಈ ಕಛೇರಿಯ ಅಬಕಾರಿ ಪೇದೆಯವರಾದ ಶ್ರೀ , ಜಯಪ್ಪ ಲಮಾಣಿ ಹಾಗೂ ಶ್ರೀ ಸಂತೋಷ್ ಎಂ ಡಂಬ್ರಳ್ಳಿ , ಬಬಿತಾರಾಣಿ ಅಬಕಾರಿ ಪೇದೆ ಮತ್ತು ವಾಹನ ಚಾಲಕರಾದ ಶ್ರೀ ಕೆ . ಮಾಯಿಲಪ್ಪ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು .

ಜಾಹೀರಾತು
ಜಾಹೀರಾತು