Wednesday, March 11, 2026
ಉಡುಪಿ

ಉಡುಪಿಯಲ್ಲಿ ಕಾಡಹಂದಿ ಹಿಡಿಯಲು ಇಟ್ಟಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು-ಕಹಳೆ ನ್ಯೂಸ್

ಉಡುಪಿ : ಹಂದಿ ಹಿಡಿಯಲು ಇಟ್ಟಿದ್ದ ಉರುಳಿಗೆ ಚಿರತೆಯೊಂದು ಬಿದ್ದು ಸಾವನಪ್ಪಿರುವ ಘಟನೆ ಉಡುಪಿಯ ಹಿರೇಬೆಟ್ಟು ಗ್ರಾಮದ ಕಂಚಿನಬೈಲು ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸರಕಾರಿ ಜಾಗದಲ್ಲಿ ಹಂದಿ ಹಿಡಿಯಲು ತಂತಿ ಉರುಳನ್ನು ಮರಕ್ಕೆ ಕಟ್ಟಲಾಗಿತ್ತು, ಆ ದಾರಿಯಲ್ಲಿ ಬಂದ ಚಿರತೆ ಉರುಳು ಕಾಣದೆ, ಮೇಲಿನಿಂದ ತಗ್ಗಿಗೆ ಇಳಿಯುವಾಗ ಉರುಳಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಉರಳು ಸೊಂಟಕ್ಕೆ ಬಿಗಿದು, ಚಿರತೆ ತಗ್ಗಿನಲ್ಲಿ ನೇತಾಡುತ್ತಾ, ನೆಲ ಮುಟ್ಟುವುದಕ್ಕೆ ಶತಪ್ರಯತ್ನ ಮಾಡಿ, ಸಾಧ್ಯವಾಗದೇ ಒದ್ದಾಡುತ್ತಾ ಅಲ್ಲಿಯೇ ಪ್ರಾಣ ಬಿಟ್ಟಿದೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಚಿರತೆಯನ್ನು, ಸ್ಥಳವನ್ನು ಮಹಜರು ಮಾಡಿದ್ದಾರೆ ಮತ್ತು ಇಲಾಖೆಯ ನಿಯಮಗಳಂತೆ ಚಿರತೆಯನ್ನು ಬೇರೆಡೆಗೆ ತೆಗೆದುಕೊಂಡು ಧಪನ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು