Recent Posts

Tuesday, March 10, 2026
ಪುತ್ತೂರು

2020-23ರ ಸಾಲಿನ ಭಾರತೀಯ ಜನತಾಪಾರ್ಟಿಯ ರಾಜ್ಯ ಯುವ ಮೋರ್ಛಾ ಕಾರ್ಯಕಾರಿಣಿ ಸದಸ್ಯರಾಗಿ ಪುನರಾಯ್ಕೆಯಾದ ಅಕ್ಷಯ್ ರೈ ದಂಬೆಕಾನ-ಕಹಳೆ ನ್ಯೂಸ್

ಪುತ್ತೂರು : ಅಕ್ಷಯ್ ರೈ ದಂಬೆಕಾನ ಅವರು 2020-23ರ ಸಾಲಿನ ಭಾರತೀಯ ಜನತಾಪಾರ್ಟಿಯ ರಾಜ್ಯ ಯುವ ಮೋರ್ಛಾ ಕಾರ್ಯಕಾರಿಣಿ ಸದಸ್ಯರಾಗಿ ಪುನರಾಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಈ ಆಯ್ಕೆಯನ್ನು ರಾಜ್ಯ ಯುವ ಮೋರ್ಛಾ ಅಧ್ಯಕ್ಷ ಡಾ// ಕೆ.ಸಿ ಸಂದೀಪ್ ಕುಮಾರ್ ಮಾಡಿದ್ದಾರೆ. 2002 ರಿಂದ ಅಕ್ಷಯ್ ದಂಬೆಕಾನ ಅವರು ಎಬಿವಿಪಿ ಪುತ್ತೂರು ಘಟಕದಲ್ಲಿ ಕೆಲಸ ಆರಂಭಿಸಿ ಬಳಿಕ ಬೆಂಗಳೂರಿನಲ್ಲಿ ನಗರ ಮಂಡಲದಲ್ಲಿ ಯುವಮೋರ್ಛಾದಲ್ಲಿ ಕೆಲಸ ಮಾಡಿದ್ದಾರೆ. ಬಳಿಕ 2012ರ ನಂತರ 2 ಬಾರಿ ಬೆಂಗಳೂರು ಯುವ ಮೋರ್ಛಾದಲ್ಲಿ ವಿವಿಧ ಜವಾಬ್ದಾರಿಯನ್ನು ಪಡೆದು ಪಕ್ಷನಿಷ್ಠೆ ತೋರಿಸಿದ್ದರು. ನಂತರ 2016 ರಲ್ಲಿ ರಾಜ್ಯ ಯುವ ಮೋರ್ಚಾದಲ್ಲಿ ಕಾರ್ಯಕಾರಿಣಿಯಾಗಿ ಆಯ್ಕೆಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಜವಬ್ದಾರಿ ಪಡೆದುಕೊಂಡು ಕೆಲಸ ಮಾಡಿದ ಅನುಭವ ಇವರಿಗಿದ್ದು, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ 5ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಜವಬ್ದಾರಿಯನ್ನು ಪಡೆದು ಕೆಲಸ ನಿರ್ವಹಿಸಿದ್ದರು. ಇದೀಗ 2ನೇ ಬಾರಿಗೆ ರಾಜ್ಯ ಯುವ ಮೋರ್ಛಾಕಾರ್ಯಕಾರಿಣಿಯಾಗಿ ಆಯ್ಕೆಯಾಗಿದ್ದಾರೆ. ಇವರು ನೂಜಿ ತರವಾಡು ಮನೆ ಸದಾಶಿವ ರೈ ದಂಬೆಕಾನ ಮತ್ತು ಪ್ರಭಾ ಎಸ್. ರೈ ಅವರ ಪುತ್ರರಾಗಿದ್ದು, ಪಕ್ಷದ ಹೆಸರಿನಲ್ಲಿ ಕಿರುಚಿತ್ರಗಳನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ.