Monday, March 9, 2026
ಬೆಂಗಳೂರು

ದೆಹಲಿಯಲ್ಲಿ ಮಂಗಳವಾರ ನಡೆದ ಟ್ಯ್ರಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ಭಾರತದಲ್ಲಿದ್ದುಕೊಂಡೇ ಹಿಂಸೆಗೆ ಪ್ರಚೋದನೆ ನೀಡಿದವರು, ಸುಳ್ಳು ಹಬ್ಬಿಸಿದ ದ್ರೋಹಿಗಳೇ ಕಾರಣ; ಶ್ರೀರಾಮುಲು-ಕಹಳೆ ನ್ಯೂಸ್

ಬೆಂಗಳೂರು : ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಮಂಗಳವಾರ ದೆಹಲಿಯಲ್ಲಿ ನಡೆದ ಟ್ಯ್ರಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ಭಾರತದಲ್ಲಿದ್ದುಕೊಂಡೇ ಹಿಂಸೆಗೆ ಪ್ರಚೋದನೆ ನೀಡಿದವರು, ಸುಳ್ಳು ಹಬ್ಬಿಸಿದ ದ್ರೋಹಿಗಳೇ ಕಾರಣ ಎಂದು ದೂರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಈ ಕುರಿತು ಅವರು ವಿದೇಶದಲ್ಲಿ ಪ್ರತಿಪಕ್ಷದ ನಾಯಕನನ್ನು ‘ಶಾಡೋ ಪ್ರೈಮ್ ಮಿನಿಸ್ಟರ್’ ಎನ್ನುತ್ತಾರೆ. ಆದರೆ ನಮ್ಮ ದೇಶದ ಕಾಂಗ್ರೆಸ್ ಪಕ್ಷ, ಅದರ ನಾಯಕರು ರೈತರ ವಿಚಾರದಲ್ಲಿಯೇ ಪಿತೂರಿ ಮಾಡುತ್ತಾರೆ ಎಂಬುದಕ್ಕೆ ಕೃಷಿ ಕಾಯ್ದೆ ವಿಚಾರದಲ್ಲಿ ರೈತರನ್ನು ಎತ್ತಿಕಟ್ಟಿದ್ದೇ ಸಾಕ್ಷಿ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ದಿಲ್ಲಿಯಲ್ಲಿ ಪ್ರತಿಭಟನೆ ಹೆಸರಿನಲ್ಲಿ ನಡೆಸಿದ ಹಿಂಸಾಚಾರ ಖಂಡಿಸುತ್ತೇನೆ. ತಿರಂಗಾ ಎಸೆದವರು, ಪೊಲೀಸರ ಮೇಲೆ ಹಲ್ಲೆ ಮಾಡಿದವರು, ಇದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದು, ರೈತರ ವಿಚಾರದಲ್ಲಿ ಖಲಿಸ್ಥಾನಿ ಪ್ರತ್ಯೇಕವಾದಿಗಳು ಮೂಗು ತೂರಿಸುವ, ಹಿಂಸಾಚಾರವನ್ನು ಬೆಂಬಲಿಸುವ ಮಟ್ಟಕ್ಕೆ ಬಂದಿದ್ದಾರೆ ಎಂದರೆ ಅದಕ್ಕೆ ಭಾರತದಲ್ಲಿದ್ದುಕೊಂಡೇ ಹಿಂಸೆಗೆ ಪ್ರಚೋದನೆ ನೀಡಿದವರು, ಸುಳ್ಳು ಹಬ್ಬಿಸಿದ ದ್ರೋಹಿಗಳೇ ಕಾರಣ ಎಂದು ಆರೋಪಿಸಿದ್ದಾರೆ.