Recent Posts

Tuesday, March 10, 2026
ಬೆಂಗಳೂರು

ಬ್ರಿಟನ್‍ನಿಂದ ಬೆಂಗಳೂರಿಗೆ ಕೊರೊನಾ ಸೋಂಕು ಹೊತ್ತು ತಂದ ಪ್ರಯಾಣಿಕರು-ಕಹಳೆ ನ್ಯೂಸ್

ಬೆಂಗಳೂರು: ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದವರಿಂದ ರೂಪಾಂತರ ಕೊರೊನಾ ಆತಂಕ ಆರಂಭವಾಗಿದ್ದು, ಇದೀಗ 26 ಜನರಲ್ಲಿ ಸೋಂಕು ಪತ್ತೆಯಾಗಿರುವುದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 14 ಜನರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಈ ಹಿಂದೆ ತಿಳಿದುಬಂದಿತ್ತು. ಆದರೆ ಇದೀಗ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿರುವ ಪ್ರಕಾರ 26 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ರೂಪಾಂತರ ಕೊರೊನಾ ವೈರಸ್ ಇರಬಹುದೇ ಎಂಬುದನ್ನು ಪರೀಕ್ಷಿಸಲು ಸ್ಯಾಂಪಲ್ ನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದಿದ್ದಾರೆ. 26 ಜನರಲ್ಲೂ ಸೋಂಕಿನ ಲಕ್ಷಣಗಳಿದ್ದು, ಆರೋಗ್ಯದಿಂದಲೇ ಇದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಖಾಲಿಸಲಾಗಿದೆ. ಸಂಜೆ ವೇಳೆಗೆ ಖಚಿತ ಮಾಹಿತಿ ಹೊರಬರಲಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಯುಕೆಯಿಂದ ಆಗಮಿಸಿದ 26 ಜನರು ರಾಜ್ಯಕ್ಕೆ ರೂಪಾಂತರ ಕೊರೊನಾ ಸೋಂಕು ಹೊತ್ತು ತಂದಿರುವ ಬಗ್ಗೆ ಆತಂಕ ಶುರುವಾಗಿದೆ.

ಜಾಹೀರಾತು
ಜಾಹೀರಾತು