Friday, March 13, 2026
ದಕ್ಷಿಣ ಕನ್ನಡಪುತ್ತೂರು

Breaking News : ಪುತ್ತೂರಿನ ಕೋರ್ಟು ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಹತ್ತಿದ BSNL  ನೌಕರ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವು ; ಕೇಬಲ್ ಸಂಸ್ಥೆಯ ಬೇಜವಾಬ್ದಾರಿತನದಿಂದ ಘಟನೆ, ವ್ಯಾಪಕ ಖಂಡನೆ – ಕಹಳೆ ನ್ಯೂಸ್

ಪುತ್ತೂರು : ನಗರದ ಕೋರ್ಟುರಸ್ತೆಯ ಮೀನಿನ ಮಾರುಕಟ್ಟೆ ಮುಂಭಾಗದಲ್ಲಿನ ವಿದ್ಯುತ್ ಕಂಬಕ್ಕೆ ಹತ್ತಿದ BSNL  ನೌಕರ ವಿದ್ಯುತ್ ಶಾಕ್ ಬಡಿದು ಮೃತ್ಯುವಾಗದ ಘಟನೆ ವರದಿಯಾಗಿದೆ.

ಮೃತ ವ್ಯಕ್ತಿಯು ಆರ್ಲಪದವು ಮೂಲದ ಪದ್ಮನಾಭ ಪಾಣಾಜೆ ( 44 ) ಎಂದು ಗುರುತಿಸಲಾಗಿದ್ದು, ಬಿಎಸ್ಎನ್.ಎಲ್ ಗುತ್ತಿಗೆದಾರರಾದ ಶ್ರೀ ಅಸೋಸಿಯೇಟ್ಸ್ ನಲ್ಲಿ ಕಳೆದ ಮೂರು ವರ್ಷದಿಂದ ಕೆಲಸಮಾಡುತ್ತಿದ್ದು, ಕೆಲಸ ನಿರ್ವಹಿಸಿದ್ದ ವೇಳೆಯೇ ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಆಳವಡಿಸಿಕೊಳ್ಳದೆ, ವಿದ್ಯುತ್ ಕಂಬಕ್ಕೆ ಹತ್ತಿದ್ದೇ ಘಟನೆಗೆ ಕಾರಣ ಎನ್ನಲಾಗಿದ್ದು, ಘಟನೆ ನಡೆದ ಸ್ಥಳದಿಂದ ಮುಸ್ತಫ ಕುರಿಯ, ಭಾಷಾ ಆಟೋ, ಚಂದ್ರಶೇಖರ ಮೊದಲಾದವರು ತಕ್ಷಣ ಖಾಸಗೀ ಆಸ್ಪತ್ರೆಗೆ ದಾಖಸಿದ್ದರಾದರೂ ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು