
ಪುತ್ತೂರು ಇಲ್ಲಿನ ಸುಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಗೂಡುದೀಪ ರಚನಾ ಸ್ಪರ್ಧೆಯು ಪುತ್ತೂರು ಮತ್ತು ಬೆಳ್ತಂಗಡಿ ಶಾಖೆಯಲ್ಲಿ ನವೆಂಬರ್ 15 ರಂದು ಭಾನುವಾರ ಮಧ್ಯಾಹ್ನ 3 ರ ನಂತರ ನಡೆಯಲಿದೆ. ಸ್ಪರ್ಧೆಯ 10-15 ವರ್ಷದವರೆಗಿನವರಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗಗಳಲ್ಲಿ ನಡೆಯಲಿದೆ. ಗೂಡುದೀಪ ತಯಾರಿಸಲು 1 ಗಂಟೆಯ ಸಮಯಾವಕಾಶ ನೀಡಲಾಗುವುದು ಮತ್ತು ಬೇಕಾದ ಸಾಮಾಗ್ರಿಗಳನ್ನು ಸ್ಪರ್ಧಿಗಳೇ ತರತಕ್ಕದ್ದು. ಸ್ಪರ್ಧಾಳುಗಳು 9743175916 ಅಥವಾ 9686502916 ಗೆ ಕರೆಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.














