Recent Posts

Tuesday, March 10, 2026
ಸುದ್ದಿ

ಮಂಗಳೂರು ಮೇಯರ್ ಚುನಾವಣೆಯಲ್ಲಿ ಯಾವುದೇ ಮನಸ್ತಾಪ ಇಲ್ಲ – ಯು.ಟಿ ಖಾದರ್

ಮಂಗಳೂರು : ಮೇಯರ್ ಚುನಾವಣೆ ಸಂಬಂಧ ನಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ ಎಂದು ಶಾಸಕ ಯು ಟಿ ಖಾದರ್ ಹೇಳಿದ್ದಾರೆ.

ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದ ಕಾರಣ ಸಹಜವಾಗಿಯೇ ಮೇಯರ್ ಆಕಾಂಕ್ಷಿಗಳು ಹೆಚ್ಚಿದ್ದರು. ಎಲ್ಲರೂ ತಮಗೆ ಈ ಬಾರಿ ಅವಕಾಶ ಕೇಳಿದ್ದಾರೆ. ಅದು ಸಹಜ. ಹಾಗಂತ ಎಲ್ಲರಿಗೂ ಕೊಡಲಿಕ್ಕೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಾವು ಪಕ್ಷದ ವರಿಷ್ಠ ನಾಯಕರೊಂದಿಗೆ ಚರ್ಚೆ ಮಾಡಿ ಎಲ್ಲರ ತೀರ್ಮಾನವನ್ನು ತೆಗೆದುಕೊಂಡು ಭಾಸ್ಕರ್ ಮೊಯ್ಲಿಯವರನ್ನು ಅಂತಿಮಗೊಳಿಸಿದ್ದೇವೆ. ಹೀಗಾಗಿ ಇದರಲ್ಲಿ ಯಾರಿಗೂ ಬೇಸರ ಆಗುವ ಸಂಗತಿ ಇಲ್ಲ. ಎಲ್ಲವೂ ಬಗೆಹರಿದಿದೆ ಎಂದು ಖಾದರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು