Wednesday, March 18, 2026
ಸುದ್ದಿ

ಇಂದು ಸಂಜೆ 4 ಗಂಟೆಗೆ 20 ಲಕ್ಷ ಕೋಟಿ ಪ್ಯಾಕೇಜ್ ಕುರಿತು ಮಾಹಿತಿ ನೀಡಲಿರುವ ನಿರ್ಮಲಾ ಸೀತಾರಾಮನ್-ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, ಆರ್ಥಿಕ ಪ್ಯಾಕೇಜ್‌ ಕುರಿತು ವಿವರಿಸಲಿದ್ದಾರೆ.

ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಾಕ್‌ಡೌನ್‌ನಿಂದಾಗಿರುವ ನಷ್ಟಕ್ಕೊಳಗಾಗಿರುವ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಬಡವರಿಗೆ, ಶ್ರಮಿಕ ವರ್ಗದವರಿಗೆ ಸಹಾಯವಾಗಲೆಂದು 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಈ ವಿಶೇಷ ಪ್ಯಾಕೇಜ್ ಕುರಿತು ನಿರ್ಮಲಾ ಸೀತಾರಾಮನ್ ವಿವರವನ್ನು ಹಂಚಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು

‘ನಾವು ಜನರ ಸಾಮರ್ಥ್ಯ, ಕೌಶಲಗಳನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಹೆಚ್ಚಿಸುತ್ತೇವೆ. ವಿಶ್ವದರ್ಜೆಯ ಸ್ಥಳೀಯ ಬ್ರಾಂಡ್‌ಗಳನ್ನು ರೂಪಿಸುತ್ತೇವೆ’ ಎಂದು ನಿರ್ಮಲಾ ಸೀತಾರಾಮನ್ ಟ್ವಿಟರ್‌ನಲ್ಲಿ ಪ್ಯಾಕೇಜ್‌ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದ್ದಾರೆ.

 

ಮಂಗಳವಾರ ಪ್ರಧಾನಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಹಣಕಾಸು ಸಚಿವೆ ” ಇದು ಕೇವಲ ಪ್ಯಾಕೇಜ್ ಅಲ್ಲ. ಮನಸ್ಥಿತಿಗಳ ಸುಧಾರಣೆಗೆ ಮುನ್ನುಡಿ” ಎಂದು ಹೇಳಿದ್ದರು.