Friday, March 20, 2026
ಸುದ್ದಿ

ಬಜರಂಗದಳದ ಮುಖಂಡ ಅಕ್ಷಯ್ ರಜಪೂತ್ ಸಹಿತ ಮೂವರಿಗೆ ಜಿಹಾದಿಗಳಿಂದ ಜೀವಬೆದರಿಕೆ‌ ಆರೋಪ ; ವಿಟ್ಲ ಠಾಣೆಗೆ ದೂರು – ಕಹಳೆ ನ್ಯೂಸ್

ವಿಟ್ಲ, ಎ.05: ಬಜರಂಗದಳದ ಮೂವರು ಕಾರ್ಯಕರ್ತರಿಗೆ ಅಂತರಾಷ್ಟ್ರೀಯ ಕರೆಯ ಮೂಲಕ ಜೀವ ಬೆದರಿಕೆ ಒಡ್ಡಿದ ಆರೋಪ ವಿಟ್ಲದಲ್ಲಿ ವ್ಯಕ್ತವಾಗಿದೆ.

ಬಜರಂಗದಳದ ಮುಖಂಡರಾದ ಅಕ್ಷಯ ರಜಪೂತ್, ಚರಣ್ ಕಾಪುಮಜಲು ಹಾಗೂ ಕಿರಣ್ ಕುಮಾರ್ ಎಂಬವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಿರಣ್ ಕುಮಾರ್ ಎಂಬವರಿಗೆ ರಾತ್ರಿ ಅಂತರಾಷ್ಟ್ರೀಯ ಕರೆ ಮಾಡಿ ಬೆದರಿಕೆ ಕರೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯ ಹಿನ್ನಲೆ
ಎ.4 ರಾತ್ರಿ ಸುಮಾರು 10 ಗಂಟೆಗೆ +6274657 ಎಂಬ ವಿದೇಶಿ ನಂಬರ್ ನಿಂದ ಬಜರಂಗದಳದ ಪ್ರಮುಖರಾದ ಕಿರಣ್ ಕುಮಾರ್ ಗೆ ಕರೆಮಾಡಿ , “ನಿನಗೆ ಮುಸ್ಲಿಂ ರ ವಿಷಯ ಬೇಡ. ಒಂದು ವೇಳೆ ನೀನು ಮುಸ್ಲಿಂ ರ ವಿಷಯಕ್ಕೆ ಬಂದರೆ ಕೈ ಕಾಲು ಗಂಟು ಮುರಿದು ಜೀವ ತೆಗೆಯುತ್ತೇವೆ. ಈ ಬಗ್ಗೆ ಅಕ್ಷಯ್ ರಜಪೂತ್‌ ಹಾಗೂ ಚರಣ್ ಗೆ ತಿಳಿಸಿ. ಈ ಬಗ್ಗೆ ಪ್ರತ್ಯೇಕ ವಾಗಿ ವಾರ್ನಿಂಗ್ ಕೊಡುವುದಿಲ್ಲ. ಒಂದು ವೇಳೆ ಹೆಚ್ಚು ಹಾರಾಟ ಮಾಡಿದರೆ, ನಮ್ಮ ಸುದ್ದಿಗೆ ಬಂದರೆ ನಿಮ್ಮೆಲ್ಲರನ್ನು ಶೂಟ್ ಮಾಡುತ್ತೇವೆ.” ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕಿರಣ್ ಕುಮಾರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು