Friday, March 20, 2026
ಸುದ್ದಿ

ಯಾವುದೇ ನಿರ್ದೇಶನ ಬಂದಿಲ್ಲ, ಗ್ರಾಹಕರೇ ಸಮಯಕ್ಕೆ ಸರಿಯಾಗಿ ವಿದ್ಯುತ್ ಬಿಲ್ ಪಾವತಿಸಿ – ಮೆಸ್ಕಾಂ ಹಾಗೂ ಬೆಸ್ಕಾಂ ಪ್ರಕಟಣೆ – ಕಹಳೆ ನ್ಯೂಸ್

ಮಂಗಳೂರು, ಏ 05 : ವಿದ್ಯುತ್‌ ಗ್ರಾಹಕರು 3 ತಿಂಗಳ ಅವ​ಧಿಗೆ ಬಿಲ್‌ ಪಾವತಿಸುವುದನ್ನು ಮುಂದೂಡುವ ಕುರಿತು ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರ್ಕಾರ ಅಥವಾ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನಗಳಿಲ್ಲ. ಗ್ರಾಹಕರು ತಮ್ಮ ವಿದ್ಯುತ್‌ ಬಿಲ್‌ ಪಾವತಿಗೆ ಮುಂದಾಗಬೇಕು ಎಂದು ಮೆಸ್ಕಾಂ ಹಾಗೂ ಬೆಸ್ಕಾಂ ಪ್ರಕಟಣೆಯಲ್ಲಿತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಾ ವಿದ್ಯುತ್ ಗ್ರಾಹಕರಿಗೆ ಸರಾಸರಿ ಬಿಲ್ ಅನ್ನು ನೀಡುವ ವ್ಯವಸ್ಥೆ ಮಾಡಲಾಗುವುದು. ಹೆಚ್.ಟಿ ಗ್ರಾಹಕರಿಗೆ ಈಗಾಗಲೇ ವಾಸ್ತವಿಕ ರೀಡಿಂಗ್‍ನಂತೆ ಬಿಲ್ ನೀಡಲಾಗಿರುತ್ತದೆ. ಹಾಲಿ ತಂತ್ರಾಂಶದಲ್ಲಿರುವ ಗ್ರಾಹಕರುಗಳಿಗೆ ವಿದ್ಯುತ್ ಬಿಲ್‍ಅನ್ನು ಇ-ಮೇಲ್/ಎಸ್.ಎಂ.ಎಸ್/ವಾಟ್ಸಾಪ್ ಮುಖಾಂತರ ಕಳುಹಿಸಲಾಗುವುದು.

ಜಾಹೀರಾತು
ಜಾಹೀರಾತು

ಗ್ರಾಹಕರು ಸಹಾಯವಾಣಿ 1912ಕ್ಕೆ ಕರೆಮಾಡಿ ಅವರ ಅಕೌಂಟ್‌ ಐಡಿ ಹಾಗೂ ಮೊಬೈಲ್‌ ಸಂಖ್ಯೆಯನ್ನು ನೀಡಿದಲ್ಲಿ ಬಿಲ್‌ ವಿವರಗಳನ್ನು ಇ-ಮೇಲ್‌ / ಎಸ್‌ಎಂಎಸ್‌ / ವಾಟ್ಸಾಪ್‌ ಮುಖಾಂತರ ಕಳುಹಿಸಲಾಗುವುದು. ಗ್ರಾಹಕರು ಮೆಸ್ಕಾಂನ ಜಾಲತಾಣನಲ್ಲಿ ನೋಂದಾಯಿಸಿಕೊಂಡು ವಿದ್ಯುತ್‌ ಬಿಲ್‌ ವಿವರಗಳನ್ನು ಪಡೆಯಬಹುದು. ಹಾಗೂ ಆನ್‍ಲೈನ್/ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಕೋರಿಕೊಂಡಿದೆ.

ಯಾವುದೇ ಗ್ರಾಹಕರು ಬಿಲ್ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ ಅಂತಹ ಗ್ರಾಹಕರು ಸ್ಥಳೀಯ ಉಪ ವಿಭಾಗಾಧಿಕಾರಿಗಳ ಕಛೇರಿಗೆ ಮನವಿ ಸಲ್ಲಿಸುವುದು, ಅಂತಹ ಅರ್ಜಿಗಳನ್ನು ಉಪ ವಿಭಾಗಾಧಿಕಾರಿಗಳ ಕಛೇರಿಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲು ಸೂಚಿಸಲಾಗಿದೆ.