Breaking News : ದೆಹಲಿಯ ಮಸೀದಿಯಲ್ಲಿ ತಬ್ಲೀಘ್ ಜಮಾತ್ ನಡೆಸಿದ್ದು ತಾಲಿಬಾನ್ ಕೃತ್ಯ, ಇದನ್ನು ಕ್ಷಮಿಸಲು ಸಾಧ್ಯವಿಲ್ಲ! ಎಂದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ – ಕಹಳೆ ನ್ಯೂಸ್

ದೆಹಲಿಯ ನಿಜಾಮುದ್ದೀನ್‌ನ ಮಸೀದಿಯಲ್ಲಿ ತಬ್ಲೀಘ್ ಜಮಾತ್ ನ ಪ್ರವಚನ ಸಭೆ ಭಾರತದಲ್ಲಿ ಅತೀ ಹೆಚ್ಚು ಕೊರೋನಾ ರೋಗ ಹರಡುವ ಕೇಂದ್ರಬಿಂದು ಆಗಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕದ 300 ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
It is a Talibani crime by Tabhleeghi Jamaat, such criminal act can not be forgiven. They have put lives of many people in danger. Strict action should be taken against such people & organisations that defy govt directions: MA Naqvi, Union Minority Affairs Minister on Markaz case pic.twitter.com/HUydHAPCDG
— ANI (@ANI) April 1, 2020
ಕಲಬುರ್ಗಿಯಲ್ಲಿ ಕೊರೋನಾ ವೈರಸ್ ಕಾರಣದಿಂದ ಮೃತಪಟ್ಟ ವೃದ್ದನೂ ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದನು ಎಂದು ತಿಳಿದು ಬಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಈಗಾಗಲೇ 10 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಈ ಕಾರ್ಯಕ್ರಮದ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಘಟನೆಯನ್ನು ಖಂಡಿಸಿದ್ದು “ಇದು ತಬ್ಲೀಘ್ ಜಮಾತ್ ಮಾಡಿದ ತಾಲಿಬಾನಿ ಅಪರಾಧವಾಗಿದೆ, ಈ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ, ಅವರು ಅನೇಕ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ. ಸರ್ಕಾರದ ನಿರ್ದೇಶನಗಳನ್ನು ಧಿಕ್ಕರಿಸುವ ಜನರು ಮತ್ತು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ದೆಹಲಿಯ ಮಸೀದಿಯಲ್ಲಿ ನಡೆಸಿದ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ ತಬ್ಲೀಘ್ ಜಮಾತ್ ಸಂಘಟನೆಗೆ ಉಗ್ರ ಸಂಘಟನೆಗಳ ಜೊತೆ ಲಿಂಕ್ ಇದೆ ಎಂದೂ ಹೇಳಲಾಗುತ್ತಿದೆ.














