Saturday, March 14, 2026
ಸುದ್ದಿ

ಮಂಗ್ಳೂರು ಗಲಭೆಗೆ ‘ಬಿಗ್‌ ಟ್ವಿಸ್ಟ್‌’: ಗೂಡ್ಸ್ ಆಟೋದಲ್ಲಿ ಕಲ್ಲು ತಂದಿದ್ದ ಪ್ರತಿಭಟನಾಕಾರರು, ಗಲಭೆಗೆ ತಯಾರಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ-ಕಹಳೆ ನ್ಯೂಸ್

ಮಂಗಳೂರು: ಜಿಲ್ಲೆಯಲ್ಲಿ ಗಲಭೆ ಮಾಡಲು ಪ್ರತಿಭಟನಾಕಾರರು ಮೊದಲೇ ಪ್ಲಾನ್ ಮಾಡಿ ಕೊಂಡಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಈ ನಡುವೆ ಗಲಭೆಕೋರರು ಪ್ರತಿಭಟನೆಗೂ ಮುನ್ನವೇ ಗೂಡ್ಸ್ ಆಟೋದಲ್ಲಿ ಗೋಣಿಚೀಲಗಳಲ್ಲಿ ಕಲ್ಲುಗಳನ್ನು ತರೆಸಿಟ್ಟುಕೊಂಡು ಬಳಿಕ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆಘಾತಕಾರಿ ಅಂಶಗಳು ಹೊರಬಿದಿದ್ದಾವೆ.

ಕೆಲ ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಲಾರಂಭಿಸಿದ್ದರು. ಬಳಿಕ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದು, ಈ ಎಲ್ಲಾ ಘಟನೆಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದಾವೆ. ಕಲ್ಲು ತೂರಾಟ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪ್ರತಿಭಟನಾಕಾರರು ಒಡೆಯಲು ಯತ್ನಿಸಿರುವುದು, ಮನೆಗಳ ಮುಂದಿದ್ದ ಕ್ಯಾಮೆರಾಗಳನ್ನು ತಿರುಗಿಸಿ ಹೋಗಿರುವ ದೃಶ್ಯಗಳು ಸೆರೆಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು