ಪುತ್ತೂರು: ವಾಹನಕ್ಕೆ ಗುದ್ದಿ ನಡುರಸ್ತೆಯಲ್ಲಿ ಸಾವನ್ನಪ್ಪಿದ ದನವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರಿಂದ ಅತ್ಯಸಂಸ್ಕಾರ-ಕಹಳೆ ನ್ಯೂಸ್

ಪುತ್ತೂರಿನ ಸಮೀಪದ ಮುರದಲ್ಲಿ ಅಪಘಾತದಿಂದ ಸತ್ತು ಹೋಗಿದ್ದ ಬೀಡಾಡಿ ದನವನ್ನು ಪುತ್ತೂರಿನ ಬಜರಂಗದಳದ ಕಾರ್ಯಕರ್ತರು ಸಂಪ್ಯ ಸಮೀಪವಿರುವ ವಿಶ್ವ ಹಿಂದೂ ಪರಿಷತ್ತಿನ ನಿವೇಶನದಲ್ಲಿ ದಫನ ಮಾಡಿದರು.
ಈ ಸಂದರ್ಭ ಬಜರಂಗದಳದ ಶ್ರೀಧರ ತೆಂಕಿಲ, ಪ್ರವೀಣ್ ಕಲ್ಲೇಗ, ಪ್ರವೀಣ್ ಮುರ, ಜೀವನ್ ಪಟ್ಟೆ, ಹರ್ಷಿತ್ ಬಲ್ನಾಡು, ಗಣೇಶ್ ಭಟ್ ಪೋಳ್ಯ, ವಿಶ್ವ, ನವೀನ್, ರಾಜೇಶ್, ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.
ನವೀನ ಅರ್ಥ್‌ಮೂವರ್ಸಿನ ನವೀನ್ ಪ್ರಸಾದ್ ಜೆಸಿಬಿ ನೀಡಿ ಸಹಕರಿಸಿದರು.













