ಪುತ್ತೂರು: ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಬಲವಾದ ಉದ್ದೇಶ ಇದ್ದೇ ಇರುತ್ತದೆ. ಆದರೆ ಅದನ್ನು ಗಣನೆಗೆ ತಗೆದುಕೊಳ್ಳದೆ ಕೆಲಸ ಮಾಡುತ್ತೇವೆ. ಪ್ರತಿಯೊಂದು ಕೆಲಸ ನಮಗೆ ಫಲಕೊಡಬೇಕಾದರೆ ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇರಬೇಕು ಎಂದು ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅರವಿಂದ ಕುಡ್ಲ ಹೇಳಿದರು.
ಅವರು ಸಾಜ ಸರಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ನಡೆಯುತ್ತಿರುವ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಚಿತ್ರಗ್ರಹಣ’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಶುಕ್ರವಾರ ಮಾತನಾಡಿದರು.
ನಾವು ಕಾಣುವಂತಹ ಕನಸುಗಳು ಭವಿಷ್ಯಕ್ಕೆ ಪೂರಕವಾಗುವಂತಿರಬೇಕು. ಕಂಡಂತಹ ಕನಸುಗಳನ್ನು ನನಸಾಗಿಸುವಾಗ ಜೀವನಕ್ಕೆ ಬೇಕಾದ ಎಲ್ಲಾ ಪಾಠಗಳನ್ನು ಕಲಿಯುತ್ತೇವೆ. ಹಾಗೆಯೇ ಚಿತ್ರಗ್ರಹಣವು ಇಂದು ಹಲವು ಮಂದಿಗೆ ಹವ್ಯಾಸವಾಗಿದೆ. ಇಂತಹ ಹವ್ಯಾಸವೇ ಹಲವರ ಜೀವನಕ್ಕೆ ದಾರಿದೀಪವಾಗಿದೆ ಎಂದರಲ್ಲದೆ ಮೊಬೈಲ್ ಅನ್ನು ನಾವು ಬಳಸಬೇಕೇ ಹೊರತು ಮೊಬೈಲ್ ನಮ್ಮನ್ನು ಬಳಸಬಾರದು. ಏಕೆಂದರೆ ಗುರಿಯನ್ನು ಸಾಧಿಸುವಲ್ಲಿ ನಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಆಗ ಮಾತ್ರ ಬದುಕಿನ ಚಿತ್ರಣ ಮೂಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸೆಂಟ್ರಲ್ ಪುತ್ತೂರಿನ ಅಧ್ಯಕ್ಷ ರೋ.ಸಂತೋಷ್ ಶೆಟ್ಟಿ ಸಾಜ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೇವಾ ಮನೋಭಾವನೆಯಿಂದ ತೊಡಗಿಸಿಕೊಳ್ಳಬೇಕು. ಶಿಬಿರದಲ್ಲಿ ಕಲಿತ ಅನುಭವದ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ನಾರಾಯಣ ನಾಯ್ಕ ಅಂಬಟೆತ್ತಡ್ಕ, ಬಲ್ನಾಡು ಗ್ರಾ.ಪಂ. ಸದಸ್ಯ ಟಿ. ಇದ್ದುಕುಂಞÂ ಹಾಜಿ, ದೈವ ನರ್ತಕ ಕುಟ್ಟಿ ನಲಿಕೆಕೂಟೇಲು, ಆರ್ಯಾಪು ಗ್ರಾಮ ಸಹಾಯಕ ಉಮೇಶ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಾದ ಧನ್ಯಶ್ರೀ, ರಶ್ಮಿಕಾ, ಧನ್ಯಶ್ರೀ ಪ್ರಾರ್ಥಿಸಿದರು. ಶಿಬಿರಾರ್ಥಿ ಮಲ್ಲಿಕಾ ಸ್ವಾಗತಿಸಿ, ಆತ್ಮಿಕಾ ವಂದಿಸಿದರು. ಶಿಬಿರಾರ್ಥಿ ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
You Might Also Like
ಕರೂರ್ ಕಾಲ್ತುಳಿತ ಕೇಸ್ : CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್ – ಕಹಳೆ ನ್ಯೂಸ್
ನವದೆಹಲಿ: ಕರೂರ್ನಲ್ಲಿ 41 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ಮತ್ತು ನಟ ವಿಜಯ್ ಅವರು ಸಿಬಿಐ ಮುಂದೆ ಮೂರನೇ ಸುತ್ತಿನ...
ಉರಿ ಸೆಕ್ಟರ್ನಲ್ಲಿ ಒಳನುಸುಳಲು ಯತ್ನಿಸಿದ ಪಾಕ್ ಉಗ್ರನ ಹತ್ಯೆ – ಕಹಳೆ ನ್ಯೂಸ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರನನ್ನು ಹತ್ಯೆ ಮಾಡಿದ್ದು, ಒಳನುಸುಳುವಿಕೆಯನ್ನು ವಿಫಲಗೊಳಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶ್ರೀನಗರ...
ಹೆಬ್ರಿ, ಕಾರ್ಕಳ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆ – ಕಹಳೆ ನ್ಯೂಸ್
ಉಡುಪಿ : ಜಿಲ್ಲೆಯ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಸಂಜೆಯ ವೇಳೆ ಸಾಧಾರಣ ಮಳೆಯಾಗಿದ್ದು, ಇದರಿಂದ ಪರಿಸರದಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಕಾರ್ಕಳ ತಾಲೂಕಿನ...
ಬೆಂಗಳೂರಲ್ಲಿ ವಿವಾಹಿತೆ ಅನುಮಾನಾಸ್ಪದ ಸಾವು :ಪತಿ ವಿರುದ್ಧ ಕೊಲೆ ಆರೋಪ -ಕಹಳೆ ನ್ಯೂಸ್
ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆಯಾಗಿರುವ ಘಟನೆ ಯಲಹಂಕದಲ್ಲಿ ನಡೆದಿದ್ದು, ಪತಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಶೃತಿ (22) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿವಾಹಿತೆ....














