Tuesday, March 17, 2026
ಸುದ್ದಿ

ಹಣಕ್ಕಾಗಿ ಮಗಳ ಮಗುವನ್ನೇ ಮಾರಿದ ಪೋಷಕರು – ಕಹಳೆ ನ್ಯೂಸ್

ಚೆನ್ನೈ : ಹಣಕ್ಕಾಗಿ ಮಗಳ ಎರಡು ತಿಂಗಳ ಮಗುವನ್ನೇ ಆಕೆಯ ಪೋಷಕರು ಮಾರಿದ ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಪ್ರೀತಿಸಿ ಮದುವೆಯಾಗಿದ್ದ ಮಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗಳು ಆಸ್ಪತ್ರೆಗೆ ದಾಖಲಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿ ಮಗುವನ್ನು ಮೂರು ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಗಳಿಗೆ ಪ್ರಜ್ಞೆ ಬಂದು ಮಗು, ಪತಿಯನ್ನು ಕೇಳಿದಾಗ ಪೋಷಕರು ಯಾವುದೇ ಮಾಹಿತಿ ನೀಡಲಿಲ್ಲ. ಆಗ ಅವರಿಂದ ತಪ್ಪಿಸಿಕೊಂಡು ಬಂದ ಮಗಳು ತನ್ನ ಗಂಡನನ್ನು ಸೇರಿ ಮಗು ಕಾಣೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾಳೆ. ಬಳಿಕ ಅವರ ಸಹಾಯಕ್ಕೆ ನಿಂತ ಜಿಲ್ಲಾಧಿಕಾರಿ ಪೊಲೀಸರಿಗೆ ಮಗುವನ್ನು ಹುಡುಕಿಕೊಡುವಂತೆ ಸೂಚಿಸಿದ್ದು, ತನಿಖೆ ಶುರು ಮಾಡಿದ ಪೊಲೀಸರು ಆಕೆಯ ತಂದೆಯನ್ನು ವಿಚಾರಣೆ ಮಾಡಿ ಮಗುವನ್ನು ಮಗಳ ಮಡಿಲಿಗೆ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು