Saturday, March 14, 2026
ಸುದ್ದಿ

ಶ್ರೀ ವಿವೇಕಾನಂದ ಯುವಕ ಮಂಡಲ ವತಿಯಿಂದ ನಡೆದ 23ನೇ ವರ್ಷದ ಕರ್ನಾಟಕ ರಾಜ್ಯೋತ್ಸವ-ಕಹಳೆ ನ್ಯೂಸ್

ಮರ್ಧಾಳ ಶ್ರೀ ವಿವೇಕಾನಂದ ಯುವಕ ಮಂಡಲ ವತಿಯಿಂದ ನಡೆದ 23ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನಡೆದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದ ಧ್ವಜಾರೋಹಣವನ್ನು ಸ.ಹಿ.ಪ್ರಾ.ಶಾಲೆ ಪಾಲೆತ್ತಡ್ಕ ಇದರ ಮುಖ್ಯ ಶಿಕ್ಷಕಿ ಶ್ಯಾಮಲ ನೆರವೇರಿಸಿ, ಮಾತನಾಡಿದ ಅವರು ನಮ್ಮ ಕನ್ನಡ ನಾಡು ಜಾತಿ, ಧರ್ಮ ಬೇಧ ಮರೆತು ಬಾಳಿದಂತಹ ನಾಡು.

ಇಂತಹ ನಾಡಿನಲ್ಲಿ ಮುಂದಿನ ದಿನಗಳಲ್ಲಿ ನಾಡಿನ ಏಳಿಗೆಗೆ ಹಾಗೂ ಸೌಹಾರ್ದತೆಯ ಬದುಕು ಕಾಣಲು ಯುವ ಸಮಾಜ ಮುಂದಾಗಬೇಕು. ಇಂದು ಯುವ ಸಮುದಾಯವನ್ನು ನಾಡಿನ ಏಳಿಗೆಗೆ ಕೈ ಜೋಡಿಸಲು ಹಿರಿಯರು ಪ್ರೇರಣೆಯಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಹಿರಿಯ ಧಾರ್ಮಿಕ ಮುಂದಾಳು ಶ್ರೀನಿವಾಸ ರೈ ಮುಂಡ್ರಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಯುವಕ ಮಂಡಲ ಅಧ್ಯಕ್ಷರಾದ ಗಂಗಾಧರ ರೈ ಬಸವಪಾಲು ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಮನೋಹರ ರೈ ಅಲಿಮಾರು ಪಟ್ಟೆ ಉಪಸ್ಥಿತರಿದ್ದರು. ಉಮೇಶ್ ಬ್ರಹ್ಮಶ್ರೀ ಸ್ವಾಗತಿಸಿ, ತಿರುಮಲೇಶ್ವರ ಗೌಡ ಕೊಲ್ಯ ವಂದಿಸಿದರು. ಸಂಚಾಲಕ ಉದಯಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಭಾಷಿಣಿ ರೈ ಪ್ರಾರ್ಥಿಸಿದರು

ಜಾಹೀರಾತು
ಜಾಹೀರಾತು