Thursday, March 19, 2026
ಸುದ್ದಿ

ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪದ ಕಾಂಜೀರ್ ಕೋಡಿ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮಗಳು ಚೈತ್ರಾ ಕಣ್ಮರೆ -ಕಹಳೆ ನ್ಯೂಸ್

ಬಂಟ್ವಾಳ: ಯುವತಿಯೋರ್ವಳು ಕಂಪೆನಿಯೊಂದಕ್ಕೆ ಕೆಲಸಕ್ಕೆ ಹೋಗುವುದಾಗಿ ತೆರಳಿದವಳು ಕಾಣೆಯಾದ ಘಟನೆ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪದ ಕಾಂಜೀರ್ ಕೋಡಿ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮಗಳು ಚೈತ್ರಾ ಕಾಣೆಯಾಗಿದ್ದಾಳೆ.

ಚೈತ್ರ ಅವಳು ಕಳೆದ ಮೂರು ತಿಂಗಳ ಹಿಂದೆ ಬಿಸಿರೋಡಿನ ಗಾಮೇರ್ಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚಿಗೆ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಳು.
ಅ.14ರಂದು ಚೈತ್ರಾ ಬಿಸಿರೋಡಿನ ಬ್ಯಾಗ್ ಕಂಪೆನಿಗೆ ಕೆಲಸಕ್ಕೆ ಹೋಗುತ್ತೇನೆಂದು ಎಂದು ಹೇಳಿ ಹೋದವಳು, ಸಂಜೆ 6 ಗಂಟೆಗೆ ಮನೆಗೆ ಬರುವುದಾಗಿ ಹೇಳಿ ಪೋನ್ ಮಾಡಿದ್ದಳು. ಆದರೆ ರಾತ್ರಿ 8 ಗಂಟೆಯಾದರೂ ಮನೆಗೆ ಬಾರದೆ ಕಾಣೆಯಾಗಿದ್ದಾಳೆ, ಎಂದು ಚೈತ್ರ ಅವರ ತಾಯಿ ಪದ್ಮಾವತಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರ ಬಗ್ಗೆ ಸುಳಿವು ಸಿಕ್ಕರೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಿಳಿಸುವಂತೆ ಎಸ್.ಐ.ಚಂದ್ರಶೇಖರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು