Saturday, March 14, 2026
ಸುದ್ದಿ

ಬೈಕ್ ಹಾಗೂ ಒಮ್ನಿ ನಡುವೆ ಅಪಘಾತ : ವಿಟ್ಲ ಠಾಣಾ ವ್ಯಾಪ್ತಿಯ ನಾಡಕಚೇರಿ ಬಳಿ ಘಟನೆ – ಕಹಳೆ ನ್ಯೂಸ್

ವಿಟ್ಲ : ಬೈಕ್ ಹಾಗೂ ಒಮ್ನಿ ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ನಾಡಕಚೇರಿ ಬಳಿ ನಡೆದಿದೆ.

ಪೊನ್ನೊಟ್ಟು ನಿವಾಸಿ ಮಹಮ್ಮದ್ ಗಮಿ ಅವರ ಪುತ್ರ ಜುನೈದ್ ಎಂಬವರು ಗಾಯಗೊಂಡಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿಟ್ಲದಿಂದ ಸಾಲೆತ್ತೂರು ರಸ್ತೆಯಲ್ಲಿ ತೆರಳುತ್ತಿರುವ ವೇಳೆ ಸಾಲೆತ್ತೂರು ಕಡೆಯಿಂದ ಬಂದ ಒಮ್ನಿ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ವಿಟ್ಲ ಪೋಲೀಸ್ ಠಾಣಾ ಎಸ್‍ಐ ಯಲ್ಲಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು