Saturday, March 14, 2026
ಸುದ್ದಿ

ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲ – ಕಹಳೆ ನ್ಯೂಸ್

ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದೂ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಜನಾರ್ದನ ಗೌಡ ಇವರು ಮಾತನಾಡಿ ಶ್ರೀ ಜಗನ್ನಾಥ ದೇವಸ್ಥಾನ ಪುರಿಯಲ್ಲಿನ ಮಠ, ದೇವಸ್ಥಾನವನ್ನು ಆಕ್ರಮವೆಂದು ಒಡೆಯುವ ಕೃತ್ಯವನ್ನು ಕೂಡಲೇ ನಿಲ್ಲಿಸಬೇಕು.ಅದೇರೀತಿ ಇಲ್ಲಿಯವರೆಗೆ ಯಾವೆಲ್ಲಾ ಪ್ರಾಚೀನ ದೇವಸ್ಥಾನಗಳನ್ನು ಒಡೆಯಲಾಯಿತೊ, ಅದನ್ನು ಒಡಿಶಾ ಸರಕಾರವು ಪುನಃ ನಿರ್ಮಿಸಿಕೊಡಬೇಕು ಹಾಗೂ ಅದರ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆಂದ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗಮೋಹನ ರೆಡ್ಡಿಯ ಸರಕಾರದಿಂದ ಹಿಂದೂ ವಿರೋಧಿ ಕಾನೂನನ್ನು ರೂಪಿಸಲಾಗುತ್ತಿದೆ ಹಾಗೂ ಬಹಿರಂಗವಾಗಿ ಕ್ರೈಸ್ತ ಧರ್ಮದ ಪ್ರಸಾರವನ್ನು ಆರಂಭಿಸಲಾಗಿದೆ. ದೇವಸ್ಥಾನದ ಹಣವನ್ನು ಇತರ ಪಂಥವರಿಗೆ ನೀಡಲಾಗುತ್ತಿದೆ, ದೇವಸ್ಥಾನದ ಭೂಮಿಯನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ.ಅದೇರೀತಿ ದೇವಸ್ಥಾನದ ಭೂಮಿಯನ್ನು ವಶಕ್ಕೆ ಪಡೆದುಕೊಂಡು ಅದರಲ್ಲಿ ಮನೆ ನಿರ್ಮಿಸುವ ಯೋಜನೆಯ ನಿರ್ಣಯವನ್ನು ಕೂಡಲೇ ರದ್ದುಗೊಳಿಸಬೇಕು.ಹೈದರಾಬಾದ್ ಉಚ್ಚ ನ್ಯಾಯಾಲಯದ ಆದೇಶ ಇರುವಾಗಲೂ ನಿಯಮವನ್ನು ಮೀರಿ ದೇವಸ್ಥಾನದ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.ಇದರಿಂದಾಗಿ ಆಂದ್ರಪ್ರದೇಶದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಸರಕಾರವನ್ನು ಕಿತ್ತೊಗೆಯಬೇಕು,ನವದೆಹಲಿಯಲ್ಲಿ ಸ್ವಾತಂತ್ರ್ಯವೀರ ಸಾವರ್ಕರರ ಮೂರ್ತಿಗೆ ಕಪ್ಪು ಮಸಿ ಬಳಿದ ಕಾಂಗ್ರೆಸ್ ನ ‘ಎನ್.ಎಸ್.ಐ’ ಅಕ್ಷಯ ಲಾಕಡಾ ಇವರ ಮೇಲೆ ದೇಶದ್ರೋಹದ, ಅದೇ ರೀತಿ ರಾಷ್ಟ್ರಪ್ರೇಮಿಗಳ ಭಾವನೆಯನ್ನು ನೋಯಿಸಿದ್ದ ಆರೋಪವನ್ನು ದಾಖಲಿಸಿ ಕಠಿಣ ಕ್ರಮಕೈಗೊಳ್ಳಬೇಕು.

ಜಾಹೀರಾತು
ಜಾಹೀರಾತು

ಜಗತ್ತಿನಲ್ಲಿ ಚೀನಾದ ನಂತರ ಎಲ್ಲಕ್ಕಿಂತ ಹೆಚ್ಚಿನ ಜನಸಂಖ್ಯೆ (136 ಕೋಟಿ) ಭಾರತದ್ದಾಗಿದ್ದು ‘ಜನಸಂಖ್ಯಾ ನಿಯಂತ್ರಣ’ ಇದು ಭಾರತದ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಹೆಚ್ಚಾಗುತ್ತಿರುವ ಜನಸಂಖ್ಯೆಯಿಂದಾಗಿ ದೇಶದಲ್ಲಿನ ನೈಸರ್ಗಿಕ ಸಂಪತ್ತಿನ ಸೌಕರ್ಯ, ಆರ್ಥಿಕ ಸ್ಥಿತಿ, ಉದ್ಯೋಗ,ದವಸ-ಧಾನ್ಯ,ಶಿಕ್ಷಣ, ಸರಕಾರಿ – ಸೌಕರ್ಯ, ಸುರಕ್ಷೆಯ ವ್ಯವಸ್ಥೆ ಇತ್ಯಾದಿಗಳ ಮೇಲೆ ವಿಪರೀತ ಒತ್ತಡ ನಿರ್ಮಾಣವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರಿಗೆ ಒಂದು ಕಾನೂನು ಬಹುಸಂಖ್ಯಾತರಿಗೆ ಒಂದು ಕಾನೂನು ಮಾಡದೇ ದೇಶದಾದ್ಯಂತ ಸಮಾನ ನಾಗರಿಕ ಕಾಯ್ದೆಯನ್ನು ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಜನಾರ್ದನ ಗೌಡ ಇವರು ಮಾಡಿದರು.

ವಿಶ್ವಹಿಂದೂ ಪರಿಷತ್ತಿನ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಶ್ರೀ. ಜನಾರ್ದನ ಬೆಟ್ಟ ಇವರು ಮಾತನಾಡಿ “ಭಾರತ ಅಭಿವೃದ್ಧಿಯಾಗಬೇಕಾದರೆ ಸಮಾನ ನಾಗರಿಕ ಕಾನೂನು ಜಾರಿಗೆ ತರಬೇಕು.ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಯುವಜನತೆಯು ನಿರುದ್ಯೋಗ, ಮತ್ತು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಎಲ್ಲಾ ಪಂಥದವರಿಗೆ ಸಮಾನ ಕಾನೂನು ನಾಗರಿಕ ಕಾನೂನು ಜಾರಿಗೆ ತರಬೇಕಾಗುವುದು ಅವಶ್ಯಕವಾಗಿದೆ. ಇತ್ತೀಚೆಗೆ ಆಂದ್ರಪ್ರದೇಶದ ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ ರೆಡ್ಡಿಯ ಸರಕಾರದಿಂದ ಹಿಂದೂ ವಿರೋಧಿ ಕಾನೂನನ್ನು ರೂಪಿಸಲಾಗಿದ್ದು ಹಿಂದೂ ದೇವಸ್ಥಾನಗಳ ಪರಿಸರದಲ್ಲಿ ಇತರ ಪಂಥದವರಿಗೆ ವ್ಯಾಪಾರವನ್ನು ಮಾಡಲು ಅನುಮತಿಯನ್ನು ನೀಡಲಾಗಿದ್ದು ಹಾಗೆಯೇ ಭೂಮಿಯನ್ನು ವಶಕ್ಕೆ ಪಡೆಯುತ್ತಿದ್ದಾರೆ. ಇಂತಹ ಧರ್ಮ ವಿರೋಧಿ ಕಾರ್ಯಮಾಡುವವರ ಮೇಲೆ ಕಾನೂನು ಕ್ರಮ ಜಾರಿಗೆತರಬೇಕು. ಹಾಗೆಯೇ ದೇಶದ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯವೀರ ಸಾವರ್ಕರ್ ಇವರ ಪ್ರತಿಮೆಯನ್ನು ಅಪಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕು” ಎಂದು ವಿಚಾರ ಮಂಡಿಸಿದರು.

ಆಂದೋಲನದ ವಿಷಯದ ಕುರಿತು ಮಾನ್ಯ ಸಹಾಯಕ ಕಮೀಷನರ್‍ಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ, ಪ್ರಧಾನ ಮಂತ್ರಿಗಳಿಗೆ, ಆಂಧ್ರಪ್ರದೇಶದ ರಾಜ್ಯಪಾಲರಿಗೆ, ಒಡಿಸ್ಸಾ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು. ಆಂದೋಲನದ ಪ್ರಾರಂಭವನ್ನು ದಯಾನಂದ ಹೆಗ್ಡೆ ಇವರು ಶಂಖನಾದ ಮಾಡಿ ಪ್ರಾರಂಭಿಸಿದರು. ಆಂದೋಲನ ನಿರೂಪಣೆಯನ್ನು ಕು.ಚೇತನಾ ಇವರು ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಡಾ.ಪ್ರಸನ್ನ, ಸತೀಶ್ ಬಿ.ಎಸ್, ನರಸಿಂಹ ಪೂಂಜ ಧರ್ಮಪ್ರೇಮಿಗಳಾದ ಲಕ್ಷಣ ಬೆಳ್ಳಿಪ್ಪಾಡಿ, ಸುರೇಶ್ ಪ್ರಭು, ಗೋಪಾಲ ನಾಯಕ್, ರತ್ನಾಕರ ಪ್ರಭು ಮತ್ತಿತರರು ಉಪಸ್ಥಿತರಿದ್ದರು.