Saturday, March 14, 2026
ಸುದ್ದಿ

ಊರು ಊರು ಸುತ್ತಾಡ್ತಾ ಜನಗಣತಿಯನ್ನು ದಾಖಲಿಸ್ತಾ ಇದ್ದಾ ಶಿಕ್ಷಕರಿಗೆ ಇದೀಗ ಮುಕ್ತಿ ದೊರೆತಿದೆ-ಕಹಳೆ ನ್ಯೂಸ್

ಕೈಯಲ್ಲಿ ಪುಸ್ತಕ ಮತ್ತು ಪೆನ್ ಹಿಡಿದು ಊರು ಊರು ಸುತ್ತಾಡ್ತಾ ಜನಗಣತಿಯನ್ನು ದಾಖಲಿಸ್ತಾ ಇದ್ದಾ ಶಿಕ್ಷಕರಿಗೆ ಇದೀಗ ಮುಕ್ತಿ ದೊರೆತಿದೆ. ಎಸ್ ಕಾಗದ ರಹಿತ ಜನಗಣತಿಯ ಹೋಸ ಆ್ಯಪ್ ಅನ್ನು ಪ್ರಾರಂಬಿಸಲು ಸರ್ಕಾರ ಮುಂದಾಗಿದೆ. ಸಾಂಪ್ರದಾಯಿಕವಾಗಿ ನಡೆಸುತ್ತಿದ್ದ ಹಳೆಯ ಮಾದರಿಯ ಜನಗಣತಿ ವ್ಯವಸ್ಥೆ ಬದಲಿಗೆ ನೂತನ ಮತ್ತು ಅತ್ಯಾಧುನಿಕ ಆಯ್ಕೆಗಳುಳ್ಳ ಸರಳ ಡಿಜಿಟಲ್ ಗಣತಿ ಸೇವೆ ದೊರೆಯಲಿದೆ.

ಇನ್ನೂ ರಾಷ್ಟ್ರೀಯ ಪೌರತ್ವ ನೋಂದಾಣಿಯ ಸಹಯೋಗದಲ್ಲಿ ಸರಕಾರ ಡಿಜಿಟಲ್ ಗಣತಿ ನಡೆಸಲಿದ್ದು. ಅದಕ್ಕಾಗಿ ಪ್ರತ್ಯೇಕ ಆ್ಯಪ್ ಅನ್ನು ರೂಪಿಸಲಿದೆ. ಇದರಿಂದ ಜನಗಣತಿಯಲ್ಲಿ ಪಾಲ್ಗೋಳ್ಳುವ ಸಿಬ್ಬಂದಿ ಮೇಲಿನ ಹೊರೆ ಕಡಿಮೆಯಾಗಲಿದ್ದು ತಂತ್ರಜ್ಞಾನದ ಸಹಯೋಗದಲ್ಲಿ ಜನಗಣತಿ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಅದರ ವರ್ಗೀಕರಣ ಮತ್ತು ಅಂತಿಮ ವರದಿ ಸಿದ್ಧಪಡಿಸುವುದಕ್ಕೆ ಆ್ಯಪ್ ಮತ್ತು ವಿಶೇಷ ಸಾಫ್ಟ್‍ವೇರ್ ಕೂಡ ನೆರವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಜೊತೆಗೆ ಏಕರೂಪದ ಕಾರ್ಡ್ ಅನ್ನು ಕೂಡ ದೇಶದಲ್ಲಿ ಜಾರಿಗೆ ತರಲು ಸರಕಾರ ಮುಂದಾಗಿದ್ದು. ಎಲ್ಲ ವಿಧದ ಸೇವೆಗಳು ಮತ್ತು ಸರಕಾರಿ ಅವಶ್ಯಕತೆಗಳಿಗೆ ಬಹುಪಯೋಗಿ ಸ್ಮಾರ್ಟ್ ಕಾರ್ಡ್ ತರುವ ಯೋಜನೆಯನ್ನು ಸರಕಾರ ಹೊಂದಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು