Thursday, March 12, 2026
ಸುದ್ದಿ

ಜೈಲುಪಾಲಾದರು ಆತ್ಮ ವಿಶ್ವಾಸ ಕಳೆದುಕೋಳ್ಳದ ಡಿಕೆಶಿ-ಕಹಳೆ ನ್ಯೂಸ್

ಬೆಂಗಳೂರು: ದೆಹಲಿಯಲ್ಲಿ ಇಡಿ ಬಲೆಗೆ ಬಿದ್ದಿರುವ ಡಿ.ಕೆ.ಶಿವಕುಮಾರ್ ಅಲ್ಲಿಂದಲೇ ರಾಜಕೀಯ ಶಪಥವೊಂದನ್ನು ಮಾಡಿದ್ದಾರೆ. ಎರಡು ದಿನದ ಹಿಂದೆ ದೆಹಲಿಯ ರಾಮ ಮನೋಹರ್ ಲೋಹಿಯ ಆಸ್ಪತ್ರೆಯಲ್ಲಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಭೇಟಿ ಮಾಡಿದ್ದ ಸಂದರ್ಭದಲ್ಲಿ ಡಿಕೆಶಿ ‘ನವೆಂಬರ್’ ಮಾಡಿದ ಶಪಥ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮನ್ನ ಕಂಡು ದುಃಖಿತರಾದ ಪರಮೇಶ್ವರ್‍ಗೆ ಡಿಕೆಶಿ ಧೈರ್ಯ ತುಂಬಿದ್ದಾರೆ. ಈ ಸಂಕಷ್ಟ ಜಾಸ್ತಿ ದಿನ ಇರಲ್ಲ. ಕಾನೂನು ಪ್ರಕಾರ ಅವರು ನನ್ನನ್ನ ಏನೂ ಮಾಡಲು ಸಾದ್ಯವಿಲ್ಲ. ನಾನೇನು ತಪ್ಪು ಮಾಡಿಲ್ಲ. ಅಕೌಂಟ್ಸ್‍ನಲ್ಲಿ ಸಣ್ಣ ಪುಟ್ಟ ತಪ್ಪಾಗಿದೆ. ಅದನ್ನೇ ಕಾರಣ ಮಾಡಿಕೊಂಡು, ರಾಜಕೀಯ ಜಿದ್ದಿಗೆ ಬಿದ್ದಿದ್ದಾರೆ. ಇವರ ಆಟ ತುಂಬಾ ದಿನ ನಡೆಯಲ್ಲ ಶೀಘ್ರವಾಗಿ ಬಂಧನದಿಂದ ಬಿಡುಗಡೆ ಆಗುತ್ತೇನೆ. ನೋಡುತ್ತಾ ಇರಿ ಎಂದು ಹೇಳಿದ್ದಾರೆ. ಹೆಚ್ಚೆಂದರೆ ಈ ಸಂಕಷ್ಟ ನನಗೆ ನವೆಂಬರ್ ವರೆಗೆ ಮಾತ್ರ ಇದೆ. ನವೆಂಬರ್ ನಿಂದ ನನ್ನ ಹಾದಿಯೇ ಬೇರೆ ಎಂದು ಡಿಕೆಶಿ ಖಡಕ್ ಆಗಿ ಮಾತನಾಡಿದ್ದಾರೆ. ಮುಂದಿನ ನವೆಂಬರ್ ವರೆಗೆ ನನ್ನ ಸಮಯ ಸರಿ ಇಲ್ಲ. ನವೆಂಬರ್ ನಂತರ ನನ್ನನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೆ ಮುಂದಿನ 10 ವರ್ಷ ನನ್ನ ಜಾತಕದ ಪ್ರಕಾರ ಒಳ್ಳೆಯ ರಾಜಕೀಯ ಯೋಗ, ಅಧಿಕಾರ ಯೋಗವಿದೆ. 10 ವರ್ಷದಲ್ಲಿ ರಾಜಕೀಯ ಜೀವನದಲ್ಲಿ ನನ್ನ ಕನಸಾದ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಿಯೇ ರಾಜಕೀಯದಿಂದ ನಿರ್ಗಮಿಸುತ್ತೇನೆ ಎಂದು ಡಿಕೆಶಿ ಅವರು ಪರಮೇಶ್ವರ್ ಅವರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು

ಸಂಕಷ್ಟದ ಈ ಸಂದರ್ಭದಲ್ಲೂ ಡಿಕೆಶಿಯ ಆತ್ಮ ವಿಶ್ವಾಸದ ಈ ಶಪಥವನ್ನು ಕಂಡು ಸ್ವತಃ ಪರಮೇಶ್ವರ್ ಅವರು ಬೆಚ್ಚಿ ಬಿದ್ದಿದ್ದಾರೆ. ನವೆಂಬರ್ ಒಳಗೆ ಡಿಕೆಶಿ ಅವರು ಈ ಎಲ್ಲಾ ಕಷ್ಟದಿಂದ ಪಾರಾಗಿ, ತಮ್ಮ ಮಾತಿನಂತೆ ರಾಜ್ಯ ಆಳುವ ಕನಸು ನನಸಾಗುತ್ತಾ ಎಂಬುದೇ ಕುತೂಹಲದ ವಿಷಯವಾಗಿದೆ.