
ಮಂಗಳೂರು : ಮುಡಿಪು ಬಳಿಯ ಬೋಳಿಯಾರ್ ನಿವಾಸಿ ಪ್ರಭಾಕರ ಆಚಾರ್ಯ(57 ವರ್ಷ) ಎರಡು ದಿನಗಳ ಹಿಂದೆ ಮುಡಿಪು ಬಳಿ ತನ್ನ ಸ್ಕೂಟರ್ ಬಿಟ್ಟು ನಾಪತ್ತೆಯಾಗಿದ್ದರು.
ಮುಡಿಪುವಿನಲ್ಲಿ ಪ್ರಭಾ ಫೈನಾನ್ಸ್ ಹೊಂದಿದ್ದ ಪ್ರಭಾಕರ ಆಚಾರ್ಯ, ಫೈನಾನ್ಸ್ ವ್ಯವಹಾರದಲ್ಲಿ ನಷ್ಟ ಉಂಟಾಗಿರುವ ಹಿನ್ನೆಲೆ ಕೆಲ ದಿನಗಳಿಂದ ಮಾನಸಿಕ ಕಿನ್ನತೆಗೆ ಒಳಗಾಗಿದ್ದರು. ಮಂಗಳೂರು ಹೊರವಲಯದ ಕೋಣಾಜೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.















