
ಮಡಿಕೇರಿ: ಮುಳಿಯ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಪರಿಸರ ಉಳಿಸುವ, ಬೇಲೆಸುವ ಕಾಳಜಿಯನ್ನು ಪುತ್ತೂರಿಗೆ ಮಾತ್ರ ಸೀಮಿತವಾಗಿಡದೆ, ಮಡಿಕೇರಿಯಲ್ಲೂ ೧ ಲಕ್ಷ ಸಸಿ ಬೀಜದ ಉಂಡೆಗಳನ್ನು ಎಸೆಯುವ ಕಾರ್ಯಕ್ರಮವು ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಸಂಸ್ಥೆಯ ಚೇರ್‌ಮೇನ್ & ಮ್ಯಾನೆಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಚಾಲನೆ ನೀಡಿ ಮಾಡಿದರು. ಮುಳಿಯದ ಪರಿಸರ ಅಪಾರ ಕಾಲಜಿ ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗದೇ ಕೊಡಗಿನ ವರೆಗೆ ಪಸರಿಸಲಿ ಎಂಬುವದೇ ಇದರ ಉದ್ದೇಶ ಎಂದರು.














