
ಉಪ್ಪಿನಂಗಡಿ: ಉಪ್ಪಿನಂಗಡಿ ದೇವಾಲಯದ ದಾಖಲೆಗಳು ಹಾಗೂ ದೇವಾಲಯದ ಸುತ್ತಲಿನ ಪರಿಸರದ ಜನರನ್ನು ಶುಕ್ರವಾರ ಸಂಜೆಯಿಂದ ರಾತ್ರಿ ಸುಮಾರು 1 ಗಂಟೆಯ ವರೆಗೆ ಪ್ರವಾಹರಕ್ಷಣಾ ಗೃಹರಕ್ಷಕರು ಸ್ಥಳಾಂತರಿಸಿದರು.
ದೇವಾಲಯದ ಬಳಿ ನೀರಿನ ಮಟ್ಟ ಹೆಚ್ಚಳವಾದ್ದರಿಂದ ದೇವಾಲಯದ ಬಳಿ ಮೂಕ ಪ್ರಾಣಿ ನಾಯಿಯೊಂದು ಕೂಗುತ್ತಾ ಕುಳಿತ್ತಿತ್ತು. ಈ ವೇಳೆಗೆ ಸ್ಥಳಕ್ಕೆ ತೆರಳಿದ ಗೃಹರಕ್ಷಕರು ಅದನ್ನು ಗೃಹರಕ್ಷಕದಳದ ರಬ್ಬರ್ ಬೊಟ್‍ಲ್ಲಿ ತಂದು ಪಂಚಾಯತ್ ಸಮೀಪ ಬಿಟ್ಟಿದ್ದಾರೆ. ಪ್ರವಾಹರಕ್ಷಣಾ ಕಾರ್ಯದಲ್ಲಿ ಗೃಹರಕ್ಷರಾದ ದಿನೇಶ್, ಜನಾರ್ದನ ಆಚಾರ್ಯ, ಅಣ್ಣು, ಸೊಮನಾಥ, ವಸಂತ, ಸಮದ್, ನಿಖಿಲ್ ರಾಜ್, ಸ್ಥಳಿಯ ಸಾರ್ವಜನಿಕರು ಸಹಕರಿಸಿದರು.


















