
ಪುತ್ತೂರು : ಪುತ್ತೂರು ಯುವವಾಹಿನಿ (ರಿ) ಇದರ 32ನೇ ವಾರ್ಷಿಕ ಸಮಾವೇಶ ಉದ್ಘಾಟನೆ ಇಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಗದ್ದೆಯಲ್ಲಿ ನಡೆಯಿತು. ವಿಶೇಷ ಅತಿಥಿಯಾಗಿ ಅಣ್ಣಮಲೈ ಐಪಿಎಸ್ ಮತ್ತು ಕೃಷ್ಣ ಮೂರ್ತಿ ಉಪವಿಭಾಗಾಧಿಕಾರಿ, ಡಾ. ರಾಜಶೇಖರ್ ಕೊಟ್ಯಾನ್, ತುಳು ಚಲನಚಿತ್ರ ನಟಿ ನವ್ಯ ಪೂಜಾರಿ, ಜಯಂತ ನಡುಬೈಲ್ ಹಾಗೂ ಎಲ್ಲಾ ಯುವವಾಹಿನಿ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಯುವವಾಹಿನಿ ಸದಸ್ಯರು ಆಗಮಿಸುತ್ತಿದ್ದಾರೆ.















