Tuesday, March 17, 2026
ಸುದ್ದಿ

ಮೆಸ್ಕಾಂ ಉದ್ಯೋಗಿಯನ್ನು ಬಲಿಪಡೆಯಿತು ಪುತ್ತೂರಿನಲ್ಲಿ ನಡೆದ ಭೀಕರ ಬೈಕ್ ಅಪಘಾತ – ಕಹಳೆ ನ್ಯೂಸ್

ಪುತ್ತೂರು:ಆ 7: ನಿನ್ನೆ ರಾತ್ರಿ ಬೈಕ್ ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿನ ಹೊರವಲಯದ ನೆಹರುನಗರದಲ್ಲಿ ನಡೆದಿದೆ. ಕೋಡಿಂಬಾಡಿ ಭಂಡಾರದ ಮನೆ ನಿವಾಸಿ ವಸಂತ ಗೌಡ (40) ಮೃತಪಟ್ಟ ದುರ್ದೈವಿ. ಇವರು ಮೆಸ್ಕಾಂ ಇಲಾಖೆಯಲ್ಲಿ ನಿವಾಸಿಯಾಗಿದ್ದರು.

ಸದ್ಯ ಅವರು ನೆಹರು ನಗರದಲ್ಲಿ ಸ್ವಂತ ಮನೆ ಹೊಂದಿದ್ದು ಅಲ್ಲಿಯೇ ವಾಸವಾಗಿದ್ದರು. ಮೃತರು ತಂದೆ ಶಿವಪ್ಪ ಗೌಡ, ತಾಯಿ ಜಾನಕಿ , ಪತ್ನಿ ಮತ್ತು ಹೆಣ್ಣುಮಗುವನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಪಘಾತವೂ ನೆಹರು ನಗರದಿಂದ ವಿವೇಕಾನಂದ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ನಡೆದಿದ್ದು ಅಲ್ಲಿನ ರೈಲ್ವೇ ಮೇಲ್ಸೆತುವೆಯ ಬ್ರಿಡ್ಜ್ ಗೆ ಬೈಕ್ ಬಡಿದು ಈ ದುರ್ಘಟನೆ ಸಂಭವಿಸಿದೆ. ಎದರುರಿನಿಂದ ಬರುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬೈಕ್ ಅನ್ನು ಎಡಗಡೆಗೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷಧರ್ಶಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು