
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಆಘಾತಕಾರಿ ಘಟನೆ ಸಂಭವಿಸಿದೆ. ಮಿನರಲ್ ವಾಟರ್ ಬಾಟಲಿಯಿಂದ ನೀರು ಕುಡಿದಿದ್ದು ವ್ಯಕ್ತಿಗೆ ದುಬಾರಿಯಾಗಿ ಪರಿಣಮಿಸಿದೆ. ನೀರಿನ ಬಾಟಲಿಯಲ್ಲಿದ್ದ ಹಾವಿನ ಮರಿ ಬಾಯೊಳಗೆ ಹೋಗಿದೆ. ಈ ವಿಷ್ಯ ತಿಳಿದ ವ್ಯಕ್ತಿ ದಂಗಾಗಿದ್ದಾನೆ.
ಅಕ್ವಾ ಸಿಟಿ ಫ್ಲಾಂಟ್‍ನಿಂದ ಬಂದ ನೀರನ್ನು ವ್ಯಕ್ತಿ ಬಾಟಲಿಗೆ ತುಂಬಿಸಿದ್ದಾನೆ. ನಂತರ ನೀರನ್ನು ಕುಡಿದಿದ್ದಾನೆ. ನೀರು ಬಾಯಿಗೆ ಹೋಗ್ತಿದ್ದಂತೆ ವಾಂತಿ ಬರಲು ಶುರುವಾಗಿದೆ. ತಕ್ಷಣ ಬಾಯಿಗೆ ಕೈ ಹಾಕಿ ಹಾವಿನ ಮರಿಯನ್ನು ಹೊರಗೆ ತೆಗೆದಿದ್ದಾನೆ. ನಂತರ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದಿದ್ದಾನೆ.
ಹಾವಿನ ಮರಿ ಬಾಯೊಳಗೆ ಇದ್ದಿದ್ದರಿಂದ ಯಾವುದೇ ತೊಂದರೆಯಾಗಲಿಲ್ಲ. ಹಾವಿನ ಮರಿ ಹೊಟ್ಟೆ ಸೇರಿದ್ದರೆ ತೊಂದರೆಯಾಗ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.














