
ಮೂಡಬಿದ್ರೆ: ನೇತಾಜಿ ಬ್ರಿಗೇಡ್ ವತಿಯಿಂದ ವನವಹೋತ್ಸವ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮೂಡಬಿದ್ರೆಯ ಗಾಂಧಿನಗರದ ಗ್ರಂಥಾಲಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಸನ್ನ ಕುಮಾರ್ ಗಿಡ ನೆಟ್ಟು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಪುರಸಭಾ ಸದಸ್ಯ ಪ್ರಸಾದ್ ಕುಮಾರ್, ನಾಗರಾಜ್ ಪೂಜಾರಿ, ಹರೀಶ್ ಎಂ.ಕೆ, ಶಕುಂತಳಾ, ಆಶಾ, ಮಾಜಿ ಸೈನಿಕ ಪ್ರಭಾಕರ್ ರೈ, ನೇತಾಜಿ ಬ್ರಿಗೇಡ್‍ನ ಸದಸ್ಯರು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

















