Friday, March 20, 2026
ಸುದ್ದಿ

‘ಚರಂಡಿಗೆಸೆದಿದ್ದ ನವಜಾತ ಶಿಶುವನ್ನು ರಕ್ಷಿಸಿದ ಬೀದಿ ನಾಯಿಗಳು’ – ಕಹಳೆ ನ್ಯೂಸ್

ಹರಿಯಾಣ: ಬೀದಿ ನಾಯಿಗಳು ಮನುಷ್ಯನ ಮೇಲೆ ದಾಳಿ ನಡೆಸುವುದು ಸಹಜ. ಆದರೆ ಅದಕ್ಕೆ ವಿಪರ್ಯಾಸ ಎಂಬಂತೆ ಬೀದಿ ನಾಯಿಗಳ ಗುಂಪೊಂದು ಚರಂಡಿಗೆ ಎಸೆದಿದ್ದ ಮಗುವನ್ನು ಹೊರಗೆಳೆದು ಬೊಗಳುವ ಮೂಲಕ ದಾರಿಯಲ್ಲಿ ಹೋಗುತ್ತಿದ್ದವರ ಗಮನ ಸೆಳೆದು ರಕ್ಷಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ.

ನವಜಾತ ಹೆಣ್ಣು ಶಿಶುವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಮಹಿಳೆಯೊಬ್ಬಳು ಹರ್ಯಾಣದ ಕೈಥಾಲ್ ಪಟ್ಟಣ ಸಮೀಪದ ಚರಂಡಿಗೆ ಎಸೆದಿದ್ದಳು. ಇದನ್ನು ಗಮನಿಸಿದ ಬೀದಿನಾಯಿಗಳ ಹಿಂಡು ಪ್ಲಾಸ್ಟಿಕ್‍ನಲ್ಲಿ ಸುತ್ತಿದ್ದ ಮಗುವನ್ನು ಮೇಲಕ್ಕೆ ತಂದು, ಪ್ಲಾಸ್ಟಿಕ್‍ಗಳನ್ನು ಹರಿದಿದ್ದವು. ಇದನ್ನು ಗಮನಿಸಿದ ಪಾದಚಾರಿಗಳು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಈ ಎಲ್ಲಾ ಘಟನೆ ಸಮೀಪದಲ್ಲಿ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿ ಫೂಟೇಜ್‍ನಲ್ಲಿ, ಮಹಿಳೆಯೊಬ್ಬಳು ಮಗುವನ್ನು ಪ್ಲಾಸ್ಟಿಕ್‍ನಲ್ಲಿ ಸುತ್ತಿ ಚರಂಡಿಗೆ ಎಸೆದಿದ್ದು, ಬಳಿಕ ನಾಯಿಗಳು ಮಗುವನ್ನು ಚರಂಡಿಯಿಂದ ಮೇಲಕ್ಕೆ ತಂದಿದ್ದು ದಾಖಲಾಗಿದೆ ಎಂದು ಪೊಲೀಸರು ಐಎಎನ್‍ಎಸ್‍ಗೆ ತಿಳಿಸಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು