
ಮೂಡಬಿದ್ರೆ: ಸಿಎ, ಸಿಪಿಟಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಮೂಡಬಿದ್ರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಂಜನ್ ಕಶ್ಯಪ್ (117), ವಿನಯ್ ಪಾಟೀಲ್ (115), ಪ್ರಣವ್ ಪೈ (105) ಮತ್ತು ಚೈತ್ರಾ ಹೆಗಡೆ (100) ಉತ್ತಮ ಅಂಕಗಳಿಸುವ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.

ಸಿಪಿಟಿಯು (ಸಾಮಾನ್ಯ ಅರ್ಹತಾ ಪರೀಕ್ಷೆ) ಭಾರತೀಯ ಲೆಕ್ಕ ಪರಿಶೋಧಕ ಪರೀಕ್ಷೆಗಳ ಮೊದಲ ಹಂತದ ಪರೀಕ್ಷೆಯಾಗಿದ್ದು ಐಸಿಎಐಯ ಪರಿಷ್ಕೃತ ಯೋಜನೆಯ ಪ್ರಕಾರ ಈಗ ಸಿಎ ಫೌಂಡೇಶನ್ ಎಂದು ಮರು ನಾಮಕರಣಗೊಂಡಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್‍ಕುಮಾರ್ ಶೆಟ್ಟಿ, ಸಿಪಿಟಿ ಸಂಯೋಜಕ ಪ್ರೀತಿಕಾ ಜೈನ್ ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
















