Thursday, March 19, 2026
ಸುದ್ದಿ

ವಿಶೇಷ ಅಪರಾಧ ಪತ್ತೆ ದಳದಿಂದ ಮಾದಕ ದ್ರವ್ಯ ಮಾರಟ ಮಾಡುತ್ತಿದ್ದ ತಂಡ ವಶಕ್ಕೆ – ಕಹಳೆ ನ್ಯೂಸ್

ಮಂಗಳೂರು: ಹಾನಿಕಾರಕ ಮಾದಕ ದ್ರವ್ಯವನ್ನು ಮುಂಬೈಯಿಂದ ಖರೀದಿಸಿ, ಕಾಲೇಜು ವಿದ್ಯಾರ್ಥಿಗಳ ಮೂಲಕ ಮಂಗಳೂರು ನಗರ ಮತ್ತು ಹೊರವಲಯದ ಬೀಚ್‍ಗಳಲ್ಲಿ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ವಿಶೇಷ ಅಪಾರಾಧ ಪತ್ತೆ ದಳ ಕಂಡು ಹಿಡಿವಲ್ಲಿ ಯಶಸ್ವಿಯಾಗಿದೆ. ಜುಲೈ 19ರಂದು, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀನಿವಾಸ್ ಆರ್.ಗೌಡ ನೇತ್ರತ್ವದಲ್ಲಿ ವಿಶೇಷ ಅಪರಾಧ ಪತ್ತೆ ದಳಕ್ಕೆ, ದೊರೆತ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಬೂಬಕ್ಕರ್ ಮಿಸ್ಟಾ ಯಾನೆ ಮಿಸ್ಟಾ, ಶಬ್ಬೀರ್ ಅಹಮ್ಮದ್ ಯಾನೆ ಮಿಸ್ಟಾ ಶಬ್ಬೀರ್ ಯಾನೆ ಚಪ್ಪಿ, ಇವರಿಬ್ಬರು ಮುಂಬೈಗೆ ತೆರಳಿ, ಅಲ್ಲಿಂದ ಮನುಷ್ಯನ ಜೀವಕ್ಕೆ ಹಾನಿಕಾರವಾಗುವಂತಹ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ ತರುತ್ತಿದ್ದರು. ಖರೀದಿ ಮಾಡಿ ತಂದ ಮಾದಕ ವಸ್ತುವನ್ನು ಶಿಹಾಬ್ ಅಬ್ದುಲ್ ರಝಾಕ್ ಮುಖಾತರ ತಮ್ಮ ಲಾಭಗೊಸ್ಕರ ಮಾರಾಟ ಮಾಡಿಸುತ್ತಿದ್ದರು. ಪರಾರಿಯಾಗಲು ಪ್ರಯತ್ನಿಸಿದ ಆರೋಪಿಗಳನ್ನು ಹಿಡಿದು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಜಾಹೀರಾತು
ಜಾಹೀರಾತು

ಆರೋಪಿಗಳಿಂದ 16.45ಗ್ರಾಂ ಎಮ್‍ಡಿಎಮ್‍ಎ ಮಾದಕ ವಸ್ತು, ಜುಪಿಟರ್ ಸ್ಕೋಟರ್, ಮೊಬೈಲ್‍ಗಳು, ಹಾಗೂ ನಗದು ಹಣವನ್ನು ಪೋಲಿಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.