Wednesday, March 18, 2026
ಸುದ್ದಿ

ಕೋಟ್ಯಾಧೀಶ ಮನ್ಮಥನಿಗೆ ಮದುವೆ; ಸುಂದರಿಯರು ಬೇಕಾಗಿದ್ದಾರೆ.. ಕೆನಡಕ್ಕೆ ಹಾರುವ ಅವಕಾಶ – ಕಹಳೆ ನ್ಯೂಸ್

ವೆಲ್ ಸೆಟ್‍ಲ್ಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‍ ಗೆ ಒರ್ವ ಸುಂದರ ಯುವತಿ ಬೇಕಾಗಿದ್ದಾಳೆ. ಈ ಯುವಕ ಇಷ್ಟರಲ್ಲೇ ಕೋಟ್ಯಾಂತರ ಬೆಲೆಬಾಳುವ ಸ್ವಂತ ಮನೆ ಹೊಂದಲಿದ್ದಾನೆ. ಈತನ ತಂದೆ ಕೆನಡಾದಲ್ಲಿ ಸೆಟ್ಲೆ ಆಗಿದ್ದಾರೆ. ಆದರೆ ಹುಡುಗ ಭಾರತದಲ್ಲಿ ಇರೋದ್ರಿಂದ, ಆತನಿಗೆ ಒಂಟಿತನ ಕಾಡಬಾರದೆಂದು, ಈಗ ಅವನಿಗೆ ಮದುವೆ ಮಾಡಲು ನಿಶ್ಚಯಿಸಿದ್ದಾರೆ.
ಹುಡುಗನ ತಂದೆ ಆದಷ್ಟು ಬೇಗ ಸುಂದರ ಯುವತಿಯನ್ನು ಹುಡುಕಿ, ಮದುವೆ ಮಾಡಿ ತನ್ನ ಕರ್ತವ್ಯ ಮುಗಿಸಿ, ಮತ್ತೆ ಕೆನಡಕ್ಕೆ ಮರಳಬೇಕೆಂದಿದ್ದಾರೆ. ನೋಡಿ.. ಯಾರಿಗುಂಟು.. ಯಾರಿಗಿಲ್ಲ.. ಹುಡುಗ ನಮ್ಮ ಪೂರ್ವಜ.. ಆದ್ರೆನಂತೆ ವೆಲ್ ಸೆಟ್‍ಲ್ಡ್.. ಬಂಗ್ಲೋ, ಕೆನಡಾಕ್ಕೆ ಹೋಗೋ ಚಾನ್ಸ್ ಸಿಗುತ್ತೆ.. ನೋಡಿ ನಿಮ್ಮಲ್ಲಿ ಯಾರಾದ್ರು ಸುಂದರಿಯರಿದ್ರೆ ಟ್ರೈ ಮಾಡಿ ನೋಡಿ..

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ನಾವು ಹೇಳ ಹೊರಟಿರುವ ಹುಡುಗ ಬೇರೆ ಯಾರು ಅಲ್ಲ.. ಮನ್ಮಥ ಮಂಗ.. ಹೌದು, ನಂಬಲು ಕಷ್ಟವಾದರೂ ಇದು ಸತ್ಯ. ಮಿಂಟು ಬಾಬು ಎಂಬ ಮಂಗಕ್ಕೆ ಆತನ ಮಾಲೀಕ ಮದುವೆ ಮಾಡಲು ಹೊರಟಿದ್ದಾನೆ. ಮನೆನೂ ಕಟ್ಟಲಾಗುತ್ತಿದೆ. ಅಸ್ಸಾಂನ ಶುಭಂಶು ಎಂಬ ವ್ಯಕ್ತಿ ಈ ಮಂಗನಿಗಾಗಿ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದಾನೆ. ಇಂಜಿನಿಯರ್ ಮುಗಿಸಿದ ಮೇಲೆ ಕೆನಡಾಕ್ಕೆ ಹೋಗಿ ಕೆಲಸ ಮಾಡುತ್ತಿದ್ದ ಶುಭಂಶು. ಕೆನಡದ ಕೆಲಸ ಬೇಸರ ತಂದಿತ್ತು.. ಕಾರಣ ಭಾರತಕ್ಕೆ ವಾಪಸ್ ಬಂದಿದ್ದನಂತೆ.

ಜಾಹೀರಾತು
ಜಾಹೀರಾತು

ಈ ವೇಳೆ ಮಂಗನ ಸ್ನೇಹ ಬೆಳೆಯಿತಂತೆ. ಮಂಗವನ್ನು ಮಗ, ಸಹೋದರನಂತೆ ನೋಡ್ತಾನೆ ಶುಭಂಶು. ಮಂಗ ಆತನನ್ನು ವಾಪಸ್ ಕೆನಡಾಕ್ಕೆ ಹೋಗಲು ಬಿಡಲಿಲ್ಲವಂತೆ. ಕಳೆದ ಎರಡು ವರ್ಷಗಳಿಂದ ಮಂಗನ ಜೊತೆಗಿರುವ ಶುಭಂಶು ಮಂಗನಿಗಾಗಿ ಮನೆ ನಿರ್ಮಾಣ ಮಾಡ್ತಿದ್ದಾನೆ. ಇಷ್ಟೇ ಅಲ್ಲ ಮಂಗನ ಮದುವೆಗೆ ಮುಂದಾಗಿದ್ದಾನೆ. ಮಂಗನಿಗೆ ವಧು ಅನ್ವೇಷಣೆ ಆರಂಭಿಸಿದ್ದಾನೆ. ಕೆನಡಾದಲ್ಲಿರುವ ಅವನ ಕುಟುಂಬಸ್ಥರು ಭಾರತಕ್ಕೆ ಬಂದಾಗ ವಿಜೃಂಭಣೆಯಿಂದ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಬಂದು ವಧು ವರನನ್ನು ಆಶೀರ್ವದಿಸಿ..