
ಪುತ್ತೂರು: ಕರ್ತವ್ಯ ಲೊಪ ಆರೋಪದಡಿಯಲ್ಲಿ, ಹಾರಾಡಿ ಶಾಲಾಮುಖ್ಯ ಶಿಕ್ಷಕ ಮುದರ ಅವರನ್ನು ಅಮಾನತು ಮಾಡಲು ಆದೇಶ ಹೊರಡಿಸಿದ್ದಾರೆ. ಅಕ್ಷರ ದಾಸೋಹ ಯೋಜನೆಯಡಿ ಬಂದಿರುವ ಅಕ್ಕಿ ಮೂಟೆಯಲ್ಲಿ ದುರುಪಯೋಗ ಮತ್ತು ಲೆಕ್ಕಪತ್ರ, ದಾಸ್ತಾನು ಸರಿಯಾಗಿ ನಿರ್ವಹಣೆ ಮಾಡದಿರುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.
ಈ ಹಿನ್ನಲೆಯಲ್ಲಿ, ಕರ್ತವ್ಯ ಲೋಪ ಆರೋಪದ ಅಡಿಯಲ್ಲಿ ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ಮುದರ ಬೈರ ಅವರನ್ನು ಅಮಾನತು ಮಾಡುವಂತೆ ಜಿಲ್ಲಾ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕ ಮುದರ ಬೈರ ಅವರು ಅಮಾನತು ಆದ ಹಿನ್ನಲೆಯಲ್ಲಿ, ಅವರ ಸ್ಥಾನಕ್ಕೆ ಅದೇ ಶಾಲೆಯ ಸಹ ಶಿಕ್ಷಕಿ ಪ್ರಿಯಾ ಕುಮಾರಿ ಅವರನ್ನು ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.














