Tuesday, March 17, 2026
ಸುದ್ದಿ

ಎರೆಗ್ ಗೊತ್ತು’ ನಾಟಕದ ಮುಹೂರ್ತ ಸಮಾರಂಭ – ಕಹಳೆ ನ್ಯೂಸ್

ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದೆರ್ ಕುಡ್ಲ ತಂಡದ, ಈ ವರ್ಷದ ನೂತನ ನಾಟಕದ ಶುಭ ಮುಹೂರ್ತವು ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ ಪದವಿನಂಗಡಿ ಮಂಗಳೂರು ಇಲ್ಲಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ‘ಉಮಿಲ್’ ತುಳು ಚಲನಚಿತ್ರ ನಿರ್ದೇಶಕ ರಂಜಿತ್ ಸುವರ್ಣ ಮಾತನಾಡಿ, ನಾಟಕ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟಾಗ ಮಾತ್ರ ತುಳು ರಂಗಭೂಮಿ ಬೆಳೆಯಲು ಸಾಧ್ಯ, ಈ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

‘ಎನ್ನ’ ತುಳು ಚಲನಚಿತ್ರ ನಿರ್ದೇಶಕ ವಿಶ್ವನಾಥ್ ಕೋಡಿಕಲ್ ಮಾತನಾಡಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದಾಗ ಮುಂದಿನ ಪೀಳಿಗೆಗೆ ತುಳು ರಂಗಭೂಮಿಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವೆಂದರು.ಯೂತ್ ಕ್ಲಬ್ ಪದವಿನಂಗಡಿ ಇದರ ಅಧ್ಯಕ್ಷರಾದ ಶೇಖರ್ ಪೂಜಾರಿ ಮಾತನಾಡಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದರು. ಇಂತಹ ಕಾರ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಕದಿರೆದ ಕಲಾವಿದೆರ್ ತಂಡದ ಸಂಚಾಲಕ ಪ್ರಶಾಂತ್ ಜೈನ್, ಕಳೆದ ಏಳು ವರ್ಷಗಳಿಂದ ನಮ್ಮ ತಂಡವು ಸಾಗಿ ಬಂದ ರೀತಿಯನ್ನು ವಿವರಿಸಿ ಶುಭ ಹಾರೈಸಿದರು. ಹೇಮಚಂದ್ರ ಶೆಟ್ಟಿ, ಉದಯ ಆಚಾರ್, ಸುಹಾನ್ ಕುಳಾಯಿ, ಪವನ್ ಮಂಜೇಶ್ವರ್, ಕಿಶನ್ ಸುವರ್ಣ ಹಾಗೂ ಅನೇಕ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಂಡದ ವ್ಯವಸ್ಥಾಪಕ ಹಾಗೂ ನಿರ್ದೇಶಕರಾದ ಪ್ರಶಾಂತ್ ಸಿ. ಕೆ. ಸ್ವಾಗತಿಸಿ, ಸಂಚಾಲಕ ವಿಶ್ವನಾಥ ಪೂಜಾರಿ ಧನ್ಯವಾದ ಸಮರ್ಪಿಸಿದರು. ನಿರ್ಮಲ್ ಕುಮಾರ್ ಪದ್ಮುಂಜ ಕಾರ್ಯಕ್ರಮ ನಿರೂಪಿಸಿದರು.