Tuesday, March 17, 2026
ಸುದ್ದಿ

ಉಪ್ಪಿನಂಗಡಿ ಸರಕಾರಿ ಕಾಲೇಜ್‍ನಲ್ಲಿ ಸಿಂಗಂನಿಂದ ಸರ್ಜಿಕಲ್ ದಾಳಿ : ಮೊಬೈಲ್ ತಂದ್ರೆ ಹುಷಾರ್..! ಪೊಲೀಸರು ಬರ್ತಾರೆ – ಕಹಳೆ ನ್ಯೂಸ್

ಉಪ್ಪಿನಂಗಡಿ ; ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಾಗೂ ಕಾಲೇಜ್ ಹತ್ತಿರದ ಅಂಗಡಿಗಳಿಗೆ ಉಪ್ಪಿನಂಗಡಿ ಠಾಣಾಧಿಕಾರಿ ನಂದಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾದಕದ್ರವ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನೆಲೆ, ಮಾನ್ಯ ದಕ್ಷಿಣ ಕನ್ನಡ ಎಸ್.ಪಿ ಲಕ್ಷ್ಮಿ ಪ್ರಸಾದ್ ಅವರ ಆದೇಶದ ಮೇರೆಗೆ ಪೊಲೀಸ್ ಇಲಾಖೆ ತನಿಖೆಯನ್ನ ಮತ್ತಷ್ಟು ಬಿಗಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಕಾಲೇಜಿಗೆ ಸರ್ಜಿಕಲ್ ದಾಳಿ ನಡೆಸಿ, ಕಾಲೇಜ್ ವಿದ್ಯಾರ್ಥಿಗಳ ಮೊಬೈಲ್ ಹಾಗು ಈ ಸಂದರ್ಭದಲ್ಲಿ ಕಾಲೇಜ್ ಪಕ್ಕದ ಅಂಗಡಿಗಳಲ್ಲಿ ಎರಡು ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ಬೇಕಾದವರು ಪೊಲೀಸ್ ಠಾಣೆಗೆ ತಮ್ಮ ಹೆತ್ತವರ ಜೊತೆಗೆ ಬರಲು ಸೂಚನೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು

ಪುತ್ತೂರು ಸಾಮೂಹಿಕ ಅತ್ಯಾಚಾರ ಸಂಬಂಧಪಟ್ಟಂತೆ ಕಾಲೇಜು ವಿದ್ಯಾರ್ಥಿಗಳ ಮೇಲೆ ನಿಗವಹಿಸಿ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ ಮಾದಕದ್ರವ್ಯ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕಾಲೇಜ್ ವಿದ್ಯಾರ್ಥಿಗಳಿಗೆ ಗಾಂಜಾ ಹಾಗು ಇನ್ನಿತರ ಮಾದಕದ್ರವ್ಯ ವ್ಯಸನದ ಬಗ್ಗೆ ಪಾಠ ಹೇಳಿದರು.
ಚುರುಕಿನ ಕಾರ್ಯಾಚರಣೆ  ಹಾಗೂ ಮಹತ್ವದ ನಿರ್ಧಾರಕ್ಕೆ ದಕ್ಷಿಣ ಕನ್ನಡ ಪೊಲೀಸ್ ಇಲಾಖೆಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.