Tuesday, March 17, 2026
ಸುದ್ದಿ

ಮಾಜಿ ಮೇಯರ್ ದೇವಣ್ಣ ಶೆಟ್ಟಿ ಕುಳಾಯಿ ನಿಧನ – ಕಹಳೆ ನ್ಯೂಸ್

ಪ್ರಗತಿಪರ ಕೃಷಿಕ, ಮಾಜಿ ಮೇಯರ್ ದೇವಣ್ಣ ಶೆಟ್ಟಿ ಕುಳಾಯಿ ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದರು.

ದೇವಣ್ಣ ಶೆಟ್ಟಿ ಅವರು ಯಕ್ಷಗಾನ ಕಲಾವಿದರಾಗಿದ್ದು, ಸುರತ್ಕಲ್ ಮಹಮ್ಮಾಯಿ ಮೇಳ ಸಹಿತ ಬೇರೆ ಬೇರೆ ಮೇಳಗಳಲ್ಲಿ ದುಡಿದಿದ್ದಾರೆ. ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸುರತ್ಕಲ್ ಪಟ್ಟಣ ಪ್ರದೇಶ ಗ್ರೇಟರ್ ಮಂಗಳೂರಿಗೆ ಸೇರ್ಪಡೆ ಸಂದರ್ಭದಲ್ಲಿ, ಪ್ರಥಮ ಮೇಯರ್ ಆಗಿ ಆಯ್ಕೆ ಆಗಿದ್ದರು. ದೇವಣ್ಣ ಶೆಟ್ಟಿ ಅವರು ಪುರಭವನವನ್ನು ನವೀಕೃತಗೊಳಿಸಿ ಕಲಾವಿದರಿಗೆ, ಪುರಭವನವನ್ನು ಕಡಿಮೆ ಬಾಡಿಗೆ ದರದಲ್ಲಿ ನೀಡಿದ್ದರು. ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ದೇವಣ್ಣ ಶೆಟ್ಟಿ ಅವರು ಕುಳಾಯಿಯ, ಭಾರತಿ ಇಂಗ್ಲೀಷ್ ಮೀಡಿಯಂ ಶಾಲೆಯ ಸಂಸ್ಥಾಪಕರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು