
ಪುತ್ತೂರು: 33/11ಕೆವಿ ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದುರಸ್ತಿ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಜುಲೈ 9ರಂದು ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಸುಳ್ಯ-1(ಕೇರ್ಪಳ) ಸುಳ್ಯ -2(ಶ್ರೀರಾಂ ಪೇಟೆ), ಸುಬ್ರಹ್ಮಣ್ಯ, ಕಾವು, ಕೇನ್ಯ, ಕೊಲ್ಪಾರು, ಸಂಪಾಜೆ, ಅಜ್ಜಾವರ ಪೀಡರ್‍ಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಆದ್ದರಿಂದ 33/11 ಕೆವಿ ಸುಳ್ಯ ಉಪ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ವಿದ್ಯುತ್ ಬಳಕೆದಾರರು ಗಮನಿಸಿ, ಸಹಕರಿಸುವಂತೆ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













